Select Your Language

Notifications

webdunia
webdunia
webdunia
webdunia

ಗ್ಯಾಂಗ್ ರೇಪ್ ಆದ ನೋವಿನಲ್ಲೇ ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತೆ

ಗ್ಯಾಂಗ್ ರೇಪ್ ಆದ ನೋವಿನಲ್ಲೇ ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತೆ
ಲಕ್ನೋ , ಶುಕ್ರವಾರ, 6 ಮೇ 2022 (08:40 IST)
ಲಕ್ನೋ: ತನ್ನ ಮೇಲೆ ಗ್ಯಾಂಗ್ ರೇಪ್ ಆದ ನೋವಿನಲ್ಲಿ 15 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಸಂಬಂಧಿಕರ ಮನೆಗೆ ಹೋಗಿದ್ದಾಗ ಯುವತಿಯನ್ನು ಕಾಮುಕರು ಅಪಹರಿಸಿ ಅತ್ಯಾಚಾರ ನಡೆಸಿದ್ದರು. ಆಕೆ ಎಷ್ಟು ಹೊತ್ತಾದರೂ ಮನೆಗೆ ಮರಳದೇ ಇದ್ದಾಗ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಈ ವೇಳೆ ನಡೆದ ವಿಚಾರವನ್ನು ಯುವತಿ ಮನೆಯವರಿಗೆ ತಿಳಿಸಿದ್ದಳು.

ಆದರೆ ಮನೆಯವರು ಆಕೆಗೆ ಸಾಂತ್ವನಿಸುವುದನ್ನು ಬಿಟ್ಟು ಬೈದಿದ್ದರು. ಇದರಿಂದ ಮನನೊಂದ ಆಕೆ ಇಲಿ ಪಾಷಾಣ ಸೇವಿಸಿ ಮೃತಪಟ್ಟಿದ್ದಾಳೆ. ಇದೀಗ ಪೊಲೀಸರು ಅತ್ಯಾಚಾರವೆಸಗಿ ಆರೋಪಿಗಳ ಪೈಕಿ ಒಬ್ಬಾತನನ್ನು ಸೆರೆಹಿಡಿದಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾಗುವುದಾಗಿ ನಂಬಿಸಿ ಪಿಡಬ್ಲ್ಯುಡಿ ಇಂಜಿನಿಯರ್ ಮೇಲೆ ಅತ್ಯಾಚಾರ