Publish Date: Fri, 06 May 2022 (08:30 IST)
Updated Date: Fri, 06 May 2022 (08:46 IST)
ಲಕ್ನೋ: ತಾನು ರಾಷ್ಟ್ರಮಟ್ಟದ ಶೂಟರ್, ಗೋಲ್ಡ್ ಮೆಡಲ್ ವಿನ್ನರ್ ಎಂದೆಲ್ಲಾ ಸುಳ್ಳು ಹೇಳಿ, ಆತ ಪಿಡಬ್ಲ್ಯುಡಿ ಇಲಾಖೆಯಲ್ಲಿ ಇಂಜಿನಿಯರ್ ವೃತ್ತಿಯಲ್ಲಿದ್ದ ಮಹಿಳೆಯನ್ನು ಬಲೆಗೆ ಬೀಳಿಸಿದ್ದ.
ಆಕೆಯ ಜೊತೆ ಪ್ರೀತಿಯ ನಾಟಕವಾಡಿದ್ದ ಆರೋಪಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿದ್ದ. ಬಳಿಕ ಮದುವೆ ಮಾತೆತ್ತಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ.
ಇದರಿಂದಾಗಿ ಮಹಿಳೆ ಈಗ ಪೊಲೀಸರ ಮೊರೆ ಹೋಗಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.