Select Your Language

Notifications

webdunia
webdunia
webdunia
webdunia

ಮದುವೆಯಾಗಲು ಒತ್ತಾಯಿಸಿ ಮಹಿಳೆ ಮೇಲೆ ಆಸಿಡ್ ದಾಳಿ

ಮದುವೆಯಾಗಲು ಒತ್ತಾಯಿಸಿ ಮಹಿಳೆ ಮೇಲೆ ಆಸಿಡ್ ದಾಳಿ
ಮುಂಬೈ , ಗುರುವಾರ, 5 ಮೇ 2022 (06:00 IST)
ಮುಂಬೈ: ಮದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ ಒಪ್ಪದ ವಿಧವೆ ಮಹಿಳೆ ಮೇಲೆ ರೌಡಿಗಳು ಆಸಿಡ್ ದಾಳಿ ನಡೆಸಿದ ಘಟನೆ ಕಾನ್ಪುರದಲ್ಲಿ ನಡೆದಿದೆ.

35 ವರ್ಷದ ಮಹಿಳೆಯ ಪತಿ ತೀರಿಕೊಂಡಿದ್ದರು. ಇದಾದ ಬಳಿಕ ಮಹಿಳೆಗೆ ಮದುವೆಯಾಗುವಂತೆ ಲೋಕಲ್ ರೌಡಿಯೊಬ್ಬ ಒತ್ತಾಯಿಸುತ್ತಿದ್ದ. ಆದರೆ ಆಕೆ ಒಪ್ಪಿಕೊಂಡಿರಲಿಲ್ಲ.

ಈ ಕಾರಣಕ್ಕೆ ಆಕೆಯ ಮೇಲೆ ನಡು ರಸ್ತೆಯಲ್ಲೇ ಆಸಿಡ್ ದಾಳಿ ನಡೆಸಲಾಗಿದೆ. ತಕ್ಷಣವೇ ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆರೋಪಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತನಿಗೆ ಮದ್ಯಕುಡಿಸಿ ಕಿರುಕುಳ ನೀಡಿದ ಯುವಕರು ಅರೆಸ್ಟ್