Publish Date: Sun, 15 May 2022 (08:58 IST)
Updated Date: Sun, 15 May 2022 (09:00 IST)
ಚೆನ್ನೈ: ಹೆತ್ತಮ್ಮನೇ ಮಕ್ಕಳ ಪಾಲಿಗೆ ರಾಕ್ಷಸರಾದರೆ ಕಾಪಾಡುವವರು ಯಾರು? ಇಂತಹದ್ದೇ ಒಂದು ಹೃದಯ ವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಹೆತ್ತಮ್ಮನೇ ತನ್ನ ಲವ್ವರ್ ನಿಂದ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ನಡೆಸಿದ್ದ. ಪರಿಣಾಮ ಆಕೆ ಗರ್ಭಿಣಿಯಾಗಿದ್ದಳು. ಪಾಪಿ ತಾಯಿ ಮಗಳನ್ನು ಮನೆಯಲ್ಲೇ ಇಟ್ಟುಕೊಂಡು ಹೆರಿಗೆ ಮಾಡಿಸಿದ್ದಳು.
ಆದರೆ ಮಗು ಅನಾರೋಗ್ಯಕ್ಕೀಡಾದಾಗ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದರು. ಈ ವೇಳೆ ಕೃತ್ಯ ಬಯಲಾಗಿದೆ. ತಕ್ಷಣವೇ ಅವರು ಮಕ್ಕಳ ರಕ್ಷಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಇದೀಗ ಆರೋಪಿ ತಾಯಿ ಹಾಗೂ ಆಕೆಯ 50 ವರ್ಷದ ಪ್ರಿಯಕರನನ್ನು ಬಂಧಿಸಲಾಗಿದೆ.