ನೋಯ್ಡಾ: 17 ವರ್ಷದ ಅಪ್ರಾಪ್ತ ಯುವತಿ ಮೇಲೆ 81 ವರ್ಷದ ಸ್ಕೆಚ್ ಆರ್ಟಿಸ್ಟ್ ಡಿಜಿಟಲ್ ರೇಪ್ ಮಾಡಿದ ಆರೋಪ ಎದುರಿಸುತ್ತಿದ್ದಾರೆ.
ಡಿಜಿಟಲ್ ರೇಪ್ ಎಂದರೆ ಕಾಲ ಬೆರಳು ಅಥವಾ ಕೈ ಬೆರಳು ಪ್ರಯೋಗಿಸಿ ಲೈಂಗಿಕ ಅತ್ಯಾಚಾರ ನಡೆಸುವುದಾಗಿದೆ. ಈ ರೀತಿ 81 ವರ್ಷದ ವೃದ್ಧ ಕಲಾವಿದ ಯುವತಿ ಮೇಲೆ ಕಳೆದ ಏಳು ವರ್ಷಗಳಿಂದ ದೌರ್ಜನ್ಯ ನಡೆಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಇದೀಗ ಯುವತಿ ತನ್ನ ಪೋಷಕರ ನೆರವಿನಿಂದ ಪೊಲೀಸರಿಗೆ ದೂರು ನೀಡಲು ದೈರ್ಯ ಮಾಡಿದ್ದಾಳೆ. ಪೊಲೀಸರು ಆರೋಪಿ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.