Select Your Language

Notifications

webdunia
webdunia
webdunia
webdunia

ಸಿಗರೆಟ್‌ ಪ್ಯಾಕ್‌ನಲ್ಲಿ ಮಾದಕ ವಸ್ತು ಮಾರಾಟ,ಬಂಧನ

ಸಿಗರೆಟ್‌ ಪ್ಯಾಕ್‌ನಲ್ಲಿ ಮಾದಕ ವಸ್ತು ಮಾರಾಟ,ಬಂಧನ
ಬೆಂಗಳೂರು , ಶುಕ್ರವಾರ, 13 ಮೇ 2022 (07:48 IST)
ಬೆಂಗಳೂರು:  ಕಾಲೇಜು ವಿದ್ಯಾರ್ಥಿಗಳಿಗೆ  ಸಿಗರೆಟ್‌ ಪ್ಯಾಕ್‌ನಲ್ಲಿ ಡ್ರಗ್ಸ್ ಅಡಗಿಸಿ ಪೂರೈಸುತ್ತಿದ್ದ ರೌಡಿ ಅಕ್ಬಿಬ್‌ ಪಾಷ ಹಾಗೂ ಆತನ ಸಹಚರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವಿದ್ಯಾರಣ್ಯಪುರ ಸಮೀಪದ ಎಂ.ಎಸ್‌.ಪಾಳ್ಯದ ನಿವಾಸಿ ಅಕ್ಬಿಬ್‌ ಪಾಷ ಹಾಗೂ ಪ್ರದೀಪ್‌ ಬಂಧಿತರಾಗಿದ್ದು ಆರೋಪಿಗಳಿಂದ .15 ಲಕ್ಷ ಮೌಲ್ಯದ ಎಂಡಿಎಂಎ ಕ್ರಿಸ್ಟೆಲ್‌ ಹಾಗೂ ಮೂರು ಮೊಬೈಲ್‌ಗಳು ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಸೋಲದೇವನಹಳ್ಳಿ ಬಳಿ ಡ್ರಗ್ಸ್‌ ಮಾರಾಟಕ್ಕೆ ತನ್ನ ಸಹಚರ ಪ್ರದೀಪ್‌ ಜತೆ ಪಾಷ ಸಜ್ಜಾಗಿರುವ ಮಾಹಿತಿ ಮೇರೆಗೆ ಸಿಸಿಬಿಯ ಮಾದಕ ವಸ್ತು ನಿಗ್ರಹ ದಳದ ಇನ್‌ಸ್ಪೆಕ್ಟರ್‌ ಬಿ.ಎಸ್‌.ಅಶೋಕ್‌ ನೇತೃತ್ವದ ತಂಡ ಬಂಧಿಸಿದೆ.
 
ಅಕ್ಬಿಬ್‌ ಪಾಷ ಕ್ರಿಮಿನಲ್‌ ಹಿನ್ನೆಲೆಯುಳ್ಳವನಾಗಿದ್ದು, ಆತನ ಮೇಲೆ ಕೊಲೆ ಯತ್ನ ಹಾಗೂ ಗಾಂಜಾ ಮಾರಾಟ ಸೇರಿದಂತೆ ಇತರೆ ಪ್ರಕರಣಗಳು ದಾಖಲಾಗಿವೆ. ಕೆಲ ತಿಂಗಳ ಹಿಂದೆ ಡ್ರಗ್ಸ್‌ ಕೇಸ್‌ನಲ್ಲಿ ವಿದ್ಯಾರಣ್ಯಪುರ ಠಾಣೆ ಪೊಲೀಸರಿಂದ ಬಂಧಿತನಾಗಿ ಜೈಲು ಸೇರಿದ್ದ ಆತ, ಬಳಿಕ ಜಾಮೀನು ಪಡೆದು ಹೊರ ಬಂದು ತನ್ನ ಚಾಳಿ ಮುಂದುವರಿಸಿದ್ದ. 
 
ಈ ಕ್ರಿಮಿನಲ್‌ ಕೃತ್ಯಗಳ ಹಿನ್ನೆಲೆಯಲ್ಲಿ ಪಾಷ ಮೇಲೆ ವಿದ್ಯಾರಣ್ಯಪುರ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು. ಹಣದಾಸೆ ತೋರಿಸಿ ಪ್ರದೀಪ್‌ನನ್ನು ಡ್ರಗ್ಸ್‌ ದಂಧೆಗೆ ಪಾಷ ಸೆಳೆದಿದ್ದ. ನೈಜೀರಿಯಾ ಮೂಲದ ಪೆಡ್ಲರ್‌ನಿಂದ ಡ್ರಗ್ಸ್‌  ಖರೀದಿಸಿ ಬಳಿಕ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಇತರರಿಗೆ ಆರೋಪಿಗಳು ಮಾರಾಟ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರಿಗೆ ತಿಳಿಯದಂತೆ .500 ನೋಟು ಹಾಗೂ ಸಿಗರೆಟ್‌ ಪ್ಯಾಕ್‌ನಲ್ಲಿ ಡ್ರಗ್ಸ್‌ ಅಡಗಿಸಿ ಪೂರೈಸುತ್ತಿದ್ದಾಗಿ ಪಾಷ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಈ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿರುವ ನೈಜೀರಿಯಾ ಮೂಲದ ಪೆಡ್ಲರ್‌ ಸ್ಯಾಮ್ಯುಯಲ್‌ ಪತ್ತೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ
 

Share this Story:

Follow Webdunia kannada

ಮುಂದಿನ ಸುದ್ದಿ

ಅಸನಿ ಎಪೆಕ್ಟ್– ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ ಭೀತಿ