Select Your Language

Notifications

webdunia
webdunia
webdunia
webdunia

ಬುದ್ಧ ಪೂರ್ಣಿಮಾ : ಮಾಂಸದ ಅಂಗಡಿಗಳು ಬಂದ್!

ಬುದ್ಧ ಪೂರ್ಣಿಮಾ : ಮಾಂಸದ ಅಂಗಡಿಗಳು ಬಂದ್!
ಧಾರವಾಡ , ಶುಕ್ರವಾರ, 13 ಮೇ 2022 (10:19 IST)
ಹುಬ್ಬಳ್ಳಿ : ಬುದ್ಧ ಪೂರ್ಣಿಮಾ ಪ್ರಯುಕ್ತ ಮೇ 16 ರಂದು ಅವಳಿನಗರದಲ್ಲಿ ಮಾಂಸ ಮಾರಾಟಕ್ಕೆ ನಿಷೇಧಿಸಲಾಗಿದೆ.

ಶಾಂತಿ, ಸೌಹಾರ್ದ ಮತ್ತು ಜಗತ್ತಿನ ಎಲ್ಲಾ ಜೀವಿಗಳಿಗೆ ಬದುಕುವ ಹಕ್ಕಿನ ಮಹತ್ವ ತಿಳಿಸುವ ವಿಶೇಷ ಬುದ್ಧ ಪೂರ್ಣಿಮಾ ದಿನಕ್ಕಿದೆ. ಹೀಗಾಗಿ ಅಂದು ಹು-ಧಾ ಪಾಲಿಕೆ ವ್ಯಾಪ್ತಿಯಲ್ಲಿನ ವಧಾಲಯಗಳು ಹಾಗೂ ಎಲ್ಲ ಮಾಂಸದ ಅಂಗಡಿಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ.

ಒಂದು ವೇಳೆ ಮಾಂಸದ ಅಂಗಡಿಗಳನ್ನು ತೆರೆದರೆ ಪಾಲಿಕೆಯಿಂದ ಅವರ ಲೈಸೆನ್ಸ್ ರದ್ದು ಪಡಿಸಿ, ಸರ್ಕಾರದ ನಿಯಮಗಳನ್ವಯ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪಾಲಿಕೆಯ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.


 

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯ ಮೀಸಲಾತಿಗಾಗಿ ಎಲ್ಲ ಕಾನೂನಾತ್ಮಕ ಪ್ರಯತ್ನ : ಬೊಮ್ಮಾಯಿ