Publish Date: Fri, 08 Apr 2022 (15:05 IST)
Updated Date: Fri, 08 Apr 2022 (20:09 IST)
ಬೆಂಗಳೂರು : ರಾಮನವಮಿ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಏಪ್ರಿಲ್ 10ರಂದು (ಭಾನುವಾರ) ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ.
ಮಾಂಸ ಮಾರಾಟ ನಿಷೇಧ ಮಾಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆದೇಶ ಹೊರಡಿಸಿದ್ದು, ಹಿಂದೂ ಧಾರ್ಮಿಕ ಹಬ್ಬ ರಾಮನವಮಿ ಏಪ್ರಿಲ್ 10ರಂದು ಬಂದಿದೆ.
ಭಾನುವಾರ ರಾಮನವಮಿ ಹಬ್ಬದ ಆಚರಣೆ ಹಿನ್ನೆಲೆ ಈಆದೇಶವನ್ನು ಬಿಬಿಎಂಪಿ ಜಾರಿಗೆ ತಂದಿದೆ. ಶ್ರೀರಾಮನವಮಿಯಂದು ಪ್ರಾಣಿ, ವಧೆ ಮತ್ತು ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗಿದೆ.
ಕಸಾಯಿಖಾನೆಯಲ್ಲೂ ಪಾಣಿವಧೆ, ಮಾರಾಟಕ್ಕೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ.