Publish Date: Sun, 03 Apr 2022 (14:34 IST)
Updated Date: Sun, 03 Apr 2022 (16:36 IST)
ನವದೆಹಲಿ : ನೆರೆಯ ರಾಷ್ಟ್ರ ಶ್ರೀಲಂಕಾದಲ್ಲಿ ನಿರುದ್ಯೋಗ, ಅಗತ್ಯ ವಸ್ತುಗಳ ಕೊರತೆ,
ಅಗತ್ಯ ಆಮದಿಗೆ ವಿದೇಶಿ ಕರೆನ್ಸಿ ಕೊರತೆ ಸೇರಿದಂತೆ ಮೊದಲಾದ ಕಾರಣಗಳಿಂದ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಪರಿಸ್ಥಿತಿ ದಿನೇ ದಿನೇ ಉದ್ವಿಗ್ನಗೊಳ್ಳುತ್ತಿದೆ.
ಎಲ್ಲೆಡೆ ಜನರು ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗಾಗಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಶನಿವಾರ ಸಂಜೆ 6 ರಿಂದ ಸೋಮವಾರ ಬೆಳಗ್ಗೆ 6ರ ವರೆಗೆ ಕರ್ಫ್ಯೂ ವಿಧಿಸಲಾಗಿದೆ.