Select Your Language

Notifications

webdunia
webdunia
webdunia
webdunia

ಟ್ರಂಪ್ ಮೇಲಿನ ಟ್ವಿಟರ್ ನಿರ್ಬಂಧ ವಾಪಸ್

ಟ್ರಂಪ್ ಮೇಲಿನ ಟ್ವಿಟರ್ ನಿರ್ಬಂಧ ವಾಪಸ್
bangalore , ಗುರುವಾರ, 12 ಮೇ 2022 (19:41 IST)
ಅಮೇರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಟ್ವಿಟರ್​​​ನಿಂದ ನಿಷೇಧಿಸಿರುವ ನಿರ್ಧಾರವನ್ನು ಮರಳಿ ಪಡೆಯುವುದಾಗಿ ಟೆಸ್ಲಾ ಮುಖ್ಯ ಕಾರ್ಯನಿರ್ವಾಹಕ ಎಲೋನ್ ಮಸ್ಕ್ ಹೇಳಿದ್ದಾರೆ. ಫೈನಾನ್ಷಿಯಲ್ ಟೈಮ್ಸ್​​​ನ ‘ಫ್ಯೂಚರ್ ಆಫ್ ದಿ ಕಾರ್ ಕಾನ್ಫರೆನ್ಸ್’ನಲ್ಲಿ ಈ ವಿಚಾರವನ್ನು ಅವರು ಘೋಷಿಸಿದ್ದಾರೆ. ತಮ್ಮನ್ನು ತಾವು ನಿರಂಕುಶ ಸ್ವಾತಂತ್ರ್ಯವಾದಿ ಎಂದು ಕರೆದುಕೊಂಡಿರುವ ಮಸ್ಕ್, ಇತ್ತೀಚೆಗಷ್ಟೇ ಟ್ವಿಟರ್ ಖರೀದಿಸುವ 44 ಶತಕೋಟಿ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದ್ದರು..ಜನವರಿ 6 ರಂದು ಅಮೇರಿಕಾ ರಾಜಧಾನಿಯಲ್ಲಿ ನಡೆದ ಗಲಭೆಯ ನಂತರ ಟ್ರಂಪ್ ಅವರನ್ನು ಟ್ವಿಟರ್​​​ನಿಂದ ಶಾಶ್ವತವಾಗಿ ಅಮಾನತುಗೊಳಿಸಲಾಯ್ತು..ಇದೀಗ ಟ್ವಿಟರ್​​ನ ಈ ನಿರ್ಧಾರ ಜನರಲ್ಲಿ ಅವರ ಬಗೆಗಿನ ರಾಜಕೀಯ ಅಭಿಪ್ರಾಯಗಳನ್ನು ಹೆಚ್ಚಿಸಿತು ಎಂದಿರುವ ಎಲಾನ್ ಮಸ್ಕ್, ನೈತಿಕವಾಗಿ ಅದು ತಪ್ಪಾದ ನಿರ್ಧಾರ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಸಾರ್ವಜನಿಕ ಆಸ್ತಿ ಹಾಳು ಮಾಡಿದ್ರೆ ಗುಂಡಿಕ್ಕಿ’