Select Your Language

Notifications

webdunia
webdunia
webdunia
webdunia

ಟ್ರೂಥ್ ಸೋಶಿಯಲ್‍ನ ಫೀಚರ್ಗಳೇನು?

ಟ್ರೂಥ್ ಸೋಶಿಯಲ್‍ನ ಫೀಚರ್ಗಳೇನು?
ನವದೆಹಲಿ , ಮಂಗಳವಾರ, 22 ಫೆಬ್ರವರಿ 2022 (08:02 IST)
ಟ್ರೂಥ್ ಸೋಶಿಯಲ್ ಆ್ಯಪ್ ಬಿಡುಗಡೆ ಬಗ್ಗೆ 2021ರ ಅಕ್ಟೋಬರ್ನಲ್ಲೇ ಸುದ್ದಿಯಾಗಿತ್ತು.

ಇದೀಗ ಆ್ಯಪ್ ಕೊನೆಗೂ ಡೌನ್ಲೋಡ್ ಮಾಡಲು ಲಭ್ಯವಾಗಿದೆ. ಆಂಡ್ರಾಯ್ಡ್ಗೆ ಆ್ಯಪ್ ಸದ್ಯ ಲಭ್ಯವಾಗಿಲ್ಲವಾದರೂ ಐಒಎಸ್ ಬಳಕೆದಾರರು ಆ್ಯಪ್ ಅನ್ನು ಆ್ಯಪ್ ಸ್ಟೋರ್ನಲ್ಲಿ ಡೌನ್ಲೋಡ್ ಮಾಡಬಹುದು.

ಟ್ರೂಥ್ ಸೋಶಿಯಲ್ ಆ್ಯಪ್ ರಾಜಕೀಯ ತಾರತಮ್ಯ ಮುಕ್ತವಾಗಿದೆ. ಈ ಆ್ಯಪ್ಗೆ ಯಾರು ಬೇಕಾದರೂ ಪ್ರವೇಶಿಸಬಹುದು ಹಾಗೂ ಜನರು ತಮ್ಮ ಅಭಿಪ್ರಾಯ, ಫೋಟೋ, ಸುದ್ದಿ, ವೀಡಿಯೋ ಲಿಂಕ್ಗಳನ್ನು ಇದರಲ್ಲಿ ಹಂಚಿಕೊಳ್ಳಬಹುದು.

ಆ್ಯಪ್ ಸ್ಟೊರ್ನಲ್ಲಿ ನೀಡಿರುವ ವಿವರಣೆ(ಡಿಸ್ಕ್ರಿಪ್ಶನ್) ಪ್ರಕಾರ ನಿಮ್ಮ ಪ್ರೊಫೈಲ್ನಲ್ಲಿ ನಿಮ್ಮನ್ನು ಫಾಲೋ ಮಾಡುವವರ ಹಾಗೂ ನೀವು ಫಾಲೋ ಮಾಡುತ್ತಿರುವವರ ಪಟ್ಟಿಯನ್ನು ನೋಡಬಹುದು. ನಿಮ್ಮ ಪೋಸ್ಟ್ ಹಾಗೂ ಲೈಕ್ಸ್ಗಳ ಇತಿಹಾಸವನ್ನೂ ಇದು ತೋರಿಸುತ್ತದೆ. 

ಆ್ಯಪ್ನ ಫೀಡ್ ಸೆಕ್ಷನ್ನಲ್ಲಿ ನೀವು ಫಾಲೋ ಮಾಡುವ ವ್ಯಕ್ತಿಗಳ ಪೋಸ್ಟ್ಗಳು ಕಾಣಿಸುತ್ತವೆ ಹಾಗೆಯೇ ನಿಮ್ಮ ಆಸಕ್ತಿಕರ ವಿಷಯಗಳ ಬಗೆಗಿನ ಲೇಟೆಸ್ಟ್ ವಿಷಯಗಳನ್ನೂ ಇದು ತೋರಿಸುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ