Select Your Language

Notifications

webdunia
webdunia
webdunia
webdunia

ರಂಜಾನ್ ಆಚರಣೆಗೆ ಹಲವು ನಿರ್ಬಂಧ!

ರಂಜಾನ್ ಆಚರಣೆಗೆ ಹಲವು ನಿರ್ಬಂಧ!
ಲಕ್ನೋ , ಮಂಗಳವಾರ, 3 ಮೇ 2022 (14:57 IST)
ಲಕ್ನೋ : ಮುಸ್ಲಿಮರ ಪವಿತ್ರ ರಂಜಾನ್ `ಈದ್ ಉಲ್ ಫ್ರಿತ್’ ಅನ್ನು ಶಾಂತಿಯುತವಾಗಿ,
 
ಆಚರಿಸಲು ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಹಲವು ರಾಜ್ಯಗಳಲ್ಲಿ ನಿರ್ಬಂಧಗಳನ್ನು ವಿಧಿಸಲಾಗಿದೆ.

ಇತ್ತೀಚೆಗೆ ಹನುಮ ಜಯಂತಿ ಉತ್ಸವದ ಸಂದರ್ಭದಲ್ಲಿ ವರದಿಯಾದ ಯಾವುದೇ ಹಿಂಸಾಚಾರ ಅಥವಾ ಉದ್ವಿಗ್ನ ಘಟನೆಗಳು ಮತ್ತೆ ಮರುಕಳಿಸದಂತೆ ಆಯಾ ರಾಜ್ಯ ಸರ್ಕಾರಗಳು ಮನವಿ ಮಾಡಿವೆ.

ಇದಕ್ಕಾಗಿ ಶಾಂತಿಯುತವಾಗಿ ರಂಜಾನ್ ಆಚರಣೆ ಮಾಡಲು ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. 

ಜಾಗರಣೆ ಮಾಡುವಂತಿಲ್ಲ

ಉತ್ತರ ಪ್ರದೇಶದಲ್ಲಿ ಅನುಮತಿ ಪಡೆಯದ 46 ಸಾವಿರ ಧ್ವನಿವರ್ಧಕಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ.

ಉಳಿದ 59 ಸಾವಿರ ಧ್ವನಿ ವರ್ಧಕಗಳು ಶಬ್ಧ ಮಿತಿಯ ಅನುಮತಿ ಪಡೆದು ಆಜಾನ್ಗೆ ಬಳಕೆ ಮಾಡಲಾಗುತ್ತಿದೆ. ಆದರೆ ಉತ್ತರ ಪ್ರದೇಶದ ಮೀರತ್ನಲ್ಲಿ ಮಾತ್ರ ಈದ್ ಉಲ್ ಫ್ರಿತ್ ವೇಳೆ ಜಾಗರಣೆ ನಡೆಸದಂತೆ ಎಚ್ಚರಿಕೆ ನೀಡಿದೆ.

ಕೆಲವು ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಜಾಗರಣೆ ಆಚರಿಸುವುದನ್ನು ನಿಷೇಧಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕೋವಿಡ್ ನಿಯಂತ್ರಣಕ್ಕೆ ಬಿಬಿಎಂಪಿ !