Publish Date: Tue, 03 May 2022 (07:12 IST)
Updated Date: Tue, 03 May 2022 (09:14 IST)
ಮುಂಬೈ: ರಂಜಾನ್ ಈದ್ ದಿನದಂದು ಆರತಿ ಸೇರಿದಂತೆ ಹಬ್ಬದ ಆಚರಣೆಗೆ ಅಡ್ಡಿಪಡಿಸುವ ಯಾವುದನ್ನೂ ಮಾಡಬೇಡಿ.
ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಾಳೆ ಈದ್. ಈ ಬಗ್ಗೆ ಇದರ ಬಗ್ಗೆ ಈಗಾಗಲೇ ಮಾತನಾಡಿದ್ದೇನೆ.
ಮುಸ್ಲಿಂ ಸಮುದಾಯವು ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕು. ಈ ಹಿಂದೆ ನಿರ್ಧರಿಸಿದ ಪ್ರಕಾರವಾಗಿ ಈ ಹಬ್ಬದ ದಿನ ಆರತಿ ಮಾಡಬೇಡಿ ಎಂದ ಅವರು, ಧ್ವನಿವರ್ಧಕಗಳ ಸಮಸ್ಯೆ ಧಾರ್ಮಿಕವಲ್ಲ. ಆದರೆ ಸಾಮಾಜಿಕವಾಗಿದೆ. ಮುಂದಿನ ಹಂತವನ್ನು ನಾಳೆ ತಿಳಿಸುತ್ತೇನೆ ಎಂದು ತಿಳಿಸಿದರು.
ಈದ್ ನಂತರ ಮಹಾರಾಷ್ಟ್ರದ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದು ಹಾಕದಿದ್ದರೆ ಮುಸ್ಲಿಂ ಧಾರ್ಮಿಕ ಸ್ಥಳಗಳ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸಬೇಕಾಗಿತ್ತದೆ ಎಂದು ಎಚ್ಚರಿಕೆ ನೀಡಿದ್ದರು.