Select Your Language

Notifications

webdunia
webdunia
webdunia
webdunia

ಪೀಣ್ಯ ಫ್ಲೈ ಓವರ್ ನ್ನ ಟ್ರಾಫಿಕ್ ಕಿರಿಕಿರಿಗೆ ಸದ್ಯದಲ್ಲೇ ಮುಕ್ತಿ

ಪೀಣ್ಯ ಫ್ಲೈ ಓವರ್ ನ್ನ ಟ್ರಾಫಿಕ್ ಕಿರಿಕಿರಿಗೆ ಸದ್ಯದಲ್ಲೇ ಮುಕ್ತಿ
bangalore , ಮಂಗಳವಾರ, 31 ಮೇ 2022 (20:51 IST)
ಪೀಣ್ಯ ಫ್ಲೇ ನ್ನ ಪರಿಸ್ಥಿತಿ ಸರಿ ಹೋಗಿದ್ದು, ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಆದರೆ ಲಾರಿ, ಬಸ್ ಸಹಿತ ಬಾರಿ ವಾಹನ ಸಾಗಿಸುವ ವಾಹನಗಳಿಗೆ ಕೇವಲ 20 ದಿನಗಳ ಕಾಲ ನಿರ್ಬಂಧಿಸಲಾಗಿದೆ.20 ದಿನದ ನಂತರ ಪೀಣ್ಯ ಫ್ಲೇ ವೇಳೆಗೆ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ಸಿಗುವ ಸಾಧ್ಯತೆಯಿದೆ.ಪೀಣ್ಯ ಫ್ಲೈ ಬಸ್ ನಿಲ್ದಾಣದ ಪಿಲ್ಲರ್ ನಂಬರ್ 102 ಮತ್ತು 103 ರಲ್ಲಿ ಕೇಬಲ್ ಬಾಗಿದ ಕಾರಣ ತಿಂಗಳ ಕಾಲ ರಸ್ತೆ ಬಂದ್ ಮಾಡಲಾಗಿದೆ. ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದರೆ ಈಗ ಪೀಣ್ಯ ಫ್ಲೇ ಬದಲಿಗೆ ವಾಹನಗಳು ಎಂದಿನಂತೆ ಸಂಚಾರ ನಡೆಸುತ್ತಿದೆ. ಆದರೆ ಬಾರಿ ಗಾತ್ರದ ವಾಹನಗಳಿಗೆ ಮಾತ್ರ ಅವಕಾಶವಿಲ್ಲ . ಲಾರಿಗಳು , ಬಸ್ ಗಳು ಮಾತ್ರ ಓಡಾಟ ನಡೆಸ್ತಿಲ್ಲ. ಆದ್ರು ಈಗ ಪೀಣ್ಯ ಸುತ್ತ-ಮುತ್ತ ಟ್ರಾಫಿಕ್ ಜಾಮ್ ಸಮಸ್ಯೆಯ ಕಿರಿ ಕಿರಿ ಜನರಿಗೆ ತಪ್ಪಿಲ್ಲ. ಈಗಾಗಲ್ಲೇ ವಾಹನಗಳು ಮೇಲ್ಸೇತುವೆ ಮೇಲೆ ಓಡಾಟ ನಡೆಸುತ್ತಿದೆ ಆದರೆ ಪೂರ್ಣ ಪ್ರಮಾಣದಲ್ಲಿ ಇಲ್ಲ. ಆದರೆ ಇನ್ಮುಂದೆ ಪೂರ್ಣ ಪ್ರಮಾಣದಲ್ಲಿ ವಾಹನಗಳು ಓಡಾಟಕ್ಕೆ ಅವಕಾಶ ಮಾಡಿಕೊಡಲಾಗುತ್ತೆ. ಟ್ರಾಫಿಕ್ ಜಾಮ್ ಸಮಸ್ಯೆಗೂ ಮುಕ್ತಿ ಸಿಗಲಿದೆ.

ಮೇಲ್ಸೇತುವೆ ಸಾಮರ್ಥ್ಯದ ಬಗ್ಗೆ ಎನ್ ಎಚ್ ಎ ಐ ಗೆ ಐ ಐ ಎಸ್ ಸಿ ವರದಿ ನೀಡಿದೆ. ಐಐಎಸ್ಸಿ ವರದಿ 20 ದಿನಗಳಲ್ಲಿ ಪೂರ್ಣ ಪ್ರಮಾಣದ ವಾಹನಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು. ಈಗಲೇ ಪೀಣ್ಯ ಪ್ಲೈ ಬದಲಿಗೆನ್ನ ಸಮಸ್ಯೆಗೆ ಅರ್ಧಮುಕ್ತಿಸಿಕ್ಕಿದ್ದು , ಈಗ ಸಂಪೂರ್ಣವಾದ ಮುಕ್ತಿ ಸಿಗುವ ಸಮಯ ಕೂಡಿ ಬಂದಿದೆ. ಆದರೆ ಈ ಬಗ್ಗೆ ಜನರು ಮಾತ್ರ ಈ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿಲ್ಲ 20 ದಿನ ಅಂತಾರೆ ಮೂರು ತಿಂಗಳಾದ್ರು ಇವರು ಸರಿಯಾಗಿ ಕೆಲಸ ಮಾಡಲ್ಲ . ಇವರು 20 ದಿನಗಳಲ್ಲಿ ಕೆಲಸ ಮುಗಿಸಿಕೊಡ್ತಾರೆ ಅಂದುಕೊಳ್ಳುವುದು ತಪ್ಪು . ಈಗ ಲಾರಿ, ಬಸ್ಸು ಓಡಾಟ ನಡೆಸಿದ್ದರಿಂದ ತುಂಬ ಟ್ರಾಫಿಕ್ ಜಾಮ್ ಸಂಭವಿಸುತ್ತಿದೆ. ಇನ್ನು ಇವರು ಯಾವಾಗ ಮೇಲ್ಸೇತುವೆ ಸರಿ ಮಾಡ್ತಾರೋ ? ಯಾವಾಗ ಇದಕ್ಕೆ ಮುಕ್ತಿ ಸಿಗುತ್ತೋ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈಗ 18 ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಬಾರಿ ಟ್ರಾಫಿಕ್ ಜಾಮ್ ಸಂಭವಿಸುತ್ತಿದೆ. ಈ ಮೇಲ್ಸೇತುವೆ ಪೂರ್ಣ ಪ್ರಮಾಣದಲ್ಲಿ ಸರಿ ಹೋದ್ರೆ ವಾಹನ ಸವಾರರಿಗೂ , ಜನರಿಗೂ ಅನುಕೂಲ. ಆದರೆ ಈ ಬಗ್ಗೆ ಮೇಲ್ಸೇತುವೆ ಯಾವಾಗ ಮುಗಿಯುತ್ತದೆ ಎಂದು ಮಾಹಿತಿ ನೀಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಹಿಂದೆ ಸರಿಯುತ್ತಿದ್ದಾರೆ. ಆದರೆ ಈ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನಿಧಾನವಾದ ಕಾಮಗಾರಿ ಮಾಡ್ತಾ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇತ್ತ ಲಾರಿ ಮತ್ತು ಬಸ್ ಡ್ರೈವರ್ ಗಳು ಈ ರಸ್ತೆ ಯಾವಾಗ ಸರಿ ಹೋಗುತ್ತೋ ,ಟ್ರಾಫಿಕ್ ಜಾಮ್ ಗೆ ಯಾವಾಗ ಮುಕ್ತಿ ಸಿಗುತ್ತೋ ಅಂತಾ ಅಸಾಮಾಧಾನ ಹೊರಹಾಕಿದ್ದಾರೆ.ಒಟ್ನಲಿ ಪೀಣ್ಯ ಫ್ಲೇಯ ವರೆಗೆ ಎಲ್ಲಾ ಸಮಸ್ಯೆಗಳಿಗೆ ಈ 20 ದಿನಗಳಲ್ಲಿ ಸಂಪೂರ್ಣ ಮುಕ್ತಿ ಸಿಗುತ್ತೆ ಅಂತಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಾಹಿತಿ ನೀಡಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸಾರಿಗೆ ಇಲಾಖೆಯಿಂದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯ ಕ್ರಮ