Select Your Language

Notifications

webdunia
webdunia
webdunia
Thursday, 10 April 2025
webdunia

ಸಾರಿಗೆ ಇಲಾಖೆಯಿಂದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯ ಕ್ರಮ

Department of Transportation World Tobacco Free Day
bangalore , ಮಂಗಳವಾರ, 31 ಮೇ 2022 (19:56 IST)
ವಿಶ್ವ ತಂಬಾಕು ರಹಿತ ದಿನಾಚರಣೆ" ಕಾರ್ಯ ಕ್ರಮವನ್ನು ರಾಜ್ಯ ತಂಬಾಕು ನಿಯಂತ್ರಣ ಮಂಡಳಿ, ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ರಸ್ತೆ  ಸಾರಿಗೆ .ನಿಗಮದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ತಂಬಾಕು, ಪಾನ್ ಮಸಾಲ, ಸಿಗರೇಟ್ ಸೇವನೆಯಿಂದ ಪರಿಸರ ಮತ್ತು ಮಾನವರಲ್ಲಿ ಉಂಟಾಗುವ ದುಷ್ಪರಿಣಾಮವನ್ನು ತಡೆಗಟ್ಟಲು ಅರಿವು ಮೂಡಿಸುವಂತಹ ಛಾಯಾ ಚಿತ್ರಗಳನ್ನು ಪ್ರದರ್ಶಿಸುವುದರ ಜೊತೆಗೆ ವಿಡಿಯೋ ಮತ್ತು ಆಡಿಯೋಗಳ ಮಾಹಿತಿಯನ್ನು ಬಸ್ ನಿಲ್ದಾಣದಲ್ಲಿ ಒದಗಿಸಿರುವ ಮಾನಿಟರ್ಗಳಲ್ಲಿ ಪ್ರದರ್ಶಿಸಲಾಯಿತು . ಹಾಗೂ ಸಂಸ್ಥೆಯ ಎಲ್ಲಾ ಸಾರ್ವಜನಿಕ ಸ್ಥಳಗಳ  ಆವರಣಗಳಲ್ಲಿ ‘ಧೂಮಪಾನ ನಿಷೇಧಿಸಿದೆ’ಎಂಬ ಫಲಕಗಳನ್ನು ಈಗಾಗಲೇ ಪ್ರದರ್ಶಿಸಲಾಗಿದ್ದು, ಉಲ್ಲಂಘಿಸದ್ದಲ್ಲಿ ರೂ.200/- ದಂಡವನ್ನು ವಿಧಿಸಲಾಗುತ್ತಿದ್ದು, 2021-22ನೇ ಸಾಲಿನಲ್ಲಿ ‌ನಿಗಮದ ವ್ಯಾಪ್ತಿಯಲ್ಲಿ ರೂ.1,27,560.00/- ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಸಾರಿಗೆ ನಿಗಮ ಮಾಹೀತಿ ನೀಡಿತು ಇನ್ನೂ ಈ ಕಾರ್ಯಕ್ರಮದಲ್ಲಿ ಶ್ರೀ, ಅನಿಲ್ ಕುಮಾರ್ ಎಂ,ಉಪ ಮುಖ್ಯ ಯಾಂತ್ರಿಕ ಅಭಿಯಂತರರು ಹಾಗೂ ಶ್ರೀ, ಚಂದ್ರಶೇಖರ್ ಹೆಚ್.ಸಿ, ವಿಭಾಗೀಯ ನಿಯಂತ್ರಣಾಧಿಕಾರಿ, ಸೇರಿದಂತೆ ಹಲವು  ಅಧಿಕಾರಿಗಳು ಉಪಸ್ಥಿತರಿದ್ರು

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರೀಯ ನಾಯಕ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ- ಕೋಡಿಹಳ್ಳಿ ಚಂದ್ರಶೇಖರ ಮಾಧ್ಯಮಗೋಷ್ಠಿ