Select Your Language

Notifications

webdunia
webdunia
webdunia
webdunia

ವಿಜಯ್ ಮಲ್ಯನನ್ನು ಹೊರ ಹಾಕಿದ ಯುಕೆ ಕೋರ್ಟ್!

ವಿಜಯ್ ಮಲ್ಯನನ್ನು ಹೊರ ಹಾಕಿದ ಯುಕೆ ಕೋರ್ಟ್!
ಲಂಡನ್ , ಬುಧವಾರ, 19 ಜನವರಿ 2022 (07:48 IST)
ಲಂಡನ್ : ಭಾರತೀಯ ಬ್ಯಾಂಕುಗಳಿಂದ ಸುಮಾರು 9 ಸಾವಿರ ಕೋಟಿ ರೂ. ಸಾಲ ಮಾಡಿ ಇಂಗ್ಲೆಂಡ್ಗೆ ಪರಾರಿಯಾಗಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ ಅವರನ್ನು ಲಂಡನ್ ಮನೆಯಿಂದಲೇ ಯುಕೆ ಕೋರ್ಟ್ ಹೊರ ಹಾಕಿದೆ.

ವಿಜಯ್ ಮಲ್ಯ ಅಲ್ಲದೇ ಇಡೀ ಕುಟುಂಬವನ್ನು ಲಂಡನ್ನ ಮನೆಯಿಂದ ಹೊರಹಾಕುವಂತೆ ನ್ಯಾಯಾಲಯ ಆದೇಶ ನೀಡಿದೆ. ಮಲ್ಯ ಅವರ ಕೋಟ್ಯಂತರ ರೂ. ಬೆಲೆ ಬಾಳುವ ಐಷಾರಾಮಿ ಮನೆಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಬೇಕೇ? ಬೇಡವೇ ಎಂಬುದರ ಬಗ್ಗೆ ಹೈಕೋರ್ಟ್ ಕಳೆದ ವಾರ ತೀರ್ಪನ್ನು ಕಾಯ್ದಿರಿಸಿತ್ತು.

ಇಂದು ತೀರ್ಪು ಪ್ರಕಟಿಸಿದ ಕೋರ್ಟ್, ಮಲ್ಯ ಅವರ ಮನೆಯನ್ನು ಸ್ವಿಸ್ ಬ್ಯಾಂಕ್ ಯುಬಿಎಸ್ ಸ್ವಾಧೀನಪಡಿಸಿಕೊಳ್ಳಬೇಕು ಎಂದು ಆದೇಶಿಸಿದೆ. 

9 ಸಾವಿರ ಕೋಟಿ ರೂಪಾಯಿ ಬ್ಯಾಂಕ್ ಗಳಿಗೆ ಬಾಕಿ ಹಣ ನೀಡಬೇಕಿರುವ ವಿಜಯ್ ಮಲ್ಯ ಅವರ ಲಂಡನ್ ನಲ್ಲಿರುವ ಆಸ್ತಿಯನ್ನು ವಶಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್ ನ್ಯಾಯಾಲಯದಲ್ಲಿ 13 ಭಾರತೀಯ ಬ್ಯಾಂಕ್ ಗಳ ಒಕ್ಕೂಟ ಕಾನೂನು ಸಮರ ನಡೆಸುತ್ತಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಕೊರೊನಾ ಮಹಾಸ್ಫೋಟ!