Select Your Language

Notifications

webdunia
webdunia
webdunia
webdunia

ಮೊಘಲ ಕಾಲದ ಆ ಕನ್ನಡಕ ವಿಶೇಷತೆ ಏನು? ತಿಳಿಯಿರಿ

ಮೊಘಲ ಕಾಲದ ಆ ಕನ್ನಡಕ ವಿಶೇಷತೆ ಏನು? ತಿಳಿಯಿರಿ
ಲಂಡನ್ , ಬುಧವಾರ, 27 ಅಕ್ಟೋಬರ್ 2021 (09:27 IST)
ಮೊಘಲರ ಕಾಲದ ಕನ್ನಡಕವೊಂದು ಹರಾಜಿಗೆ ಲಭ್ಯವಿದೆ ಅಂತ ಲಂಡನ್ನ ಹರಾಜು ಸಂಸ್ಥೆಯೊಂದು ತಿಳಿಸಿದೆ.
17ನೇ ಶತಮಾನದಲ್ಲಿ ಮಾಡಿಸಲಾದ ಈ ಕನ್ನಡಕಗಳಲ್ಲಿ ಒಂದನ್ನು ಗೇಟ್ ಆಫ್ ಪ್ಯಾರಾಡೈಸ್ ಹಾಗೂ ಮತ್ತೊಂದನ್ನು ಹಾಲೋ ಆಫ್ ಲೈಟ್ ಅಂತ ಕರೆಯಲಾಗಿದೆ. ಈ ಕನ್ನಡಕಗಳು ವಜ್ರದಿಂದ ಮಾಡಲಾಗಿದೆ ಅಂತ ಹರಾಜು ಮಾಡುತ್ತಿರುವ ಇಸ್ಲಾಮಿಕ್ ವರ್ಲ್ಡ್ ಆಫ್ ಸೋತ್ಬೇ ಸಂಸ್ಥೆ ತಿಳಿಸಿದೆ. ಭಾರತದಲ್ಲಿ ಈ ವಜ್ರದ ಕನ್ನಡಕಗಳು ತಯಾರಾಗಿದ್ದು, ಮೊಘಲರು ಇವುಗಳನ್ನ ಬಳಸುತ್ತಿದ್ದರು ಎನ್ನಲಾಗಿದೆ. ಇಂದು ಆನ್ಲೈನ್ ಮೂಲಕ ಈ ಪುರಾತನ ಕಾಲದ ಕನ್ನಡಕಗಳನ್ನ ಹರಾಜಾಗಲಿದ್ದು, ಸುಮಾರು 11 ಕೋಟಿಯಿಂದ 22 ಕೋಟಿಗೆ ಬಿಕರಿಯಾಗುವ ನಿರೀಕ್ಷೆ ಇದೆ ಅಂತ ಸಂಸ್ಥೆಯ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆತ್ತಲಾಗಿ ಕಳ್ಳತನ ಮಾಡುತ್ತಿದ್ದ ದಂಪತಿ!