Select Your Language

Notifications

webdunia
webdunia
webdunia
webdunia

ಇದೆಂತ ವಿಚಿತ್ರ! ನನ್ನ ಹುಟ್ಟಿಸಿದ್ಯಾಕೆ? ಯುವತಿ ಕೇಸ್

ಇದೆಂತ ವಿಚಿತ್ರ! ನನ್ನ ಹುಟ್ಟಿಸಿದ್ಯಾಕೆ? ಯುವತಿ ಕೇಸ್
ಲಂಡನ್ , ಶುಕ್ರವಾರ, 3 ಡಿಸೆಂಬರ್ 2021 (09:14 IST)
ಲಂಡನ್ : ತನ್ನ ಜನನ ಮಾಡಿಸಿದ ವೈದ್ಯರ ಮೇಲೆ ಕೇಸು ಹಾಕಿ ಮಹಿಳೆ ಗೆದ್ದಿರುವ ವಿಚಿತ್ರ ಘಟನೆ ಲಂಡನ್ನಲ್ಲಿ ನಡೆದಿದೆ.
ಮೆದುಳು ಬಳ್ಳಿ ಮತ್ತು ಬೆನ್ನು ಮೂಳೆ ಸರಿಯಾಗಿ ಜೋಡಣೆಯಾದಿರುವಂತಹ ಸ್ಟೈನಾ ಬಿಫಿಡಾ ಖಾಯಿಲೆಯಿಂದ ಬಳಲುತ್ತಿರುವ ಇವಿ ಟೂಂಬಿಸ್ ಎಂಬ ಮಹಿಳೆ ತನ್ನ ತಾಯಿಯ ವೈದ್ಯ ಡಾ.ಫಿಲಿಪ್ ವಿರುದ್ಧ ದೂರು ನೀಡಿದ್ದಾರೆ. ತನ್ನ ತಾಯಿ ಗರ್ಭಿಣಿಯಾಗಿದ್ದಾಗ ವೈದರು ಸರಿಯಾದ ಮಾರ್ಗದರ್ಶನ ನೀಡಿದ್ದರೆ, ಅವರು ಗರ್ಭಿಣಿಯಾಗುವುದನ್ನು ಮುಂದೂಡುತ್ತಿದ್ದರು.
ಆಗ ಈ ಸಮಸ್ಯೆ ತನ್ನನ್ನು ಕಾಡುತ್ತಿರಲಿಲ್ಲ. ಆದರೆ ವೈದ್ಯರು ಸರಿಯಾದ ಮಾರ್ಗದರ್ಶನ ನೀಡದೇ ಇದ್ದುದರಿಂದ ಈ ಪರಿಸ್ಥಿತಿ ಉಂಟಾಗಿದೆ ಎಂದಿದ್ದಾರೆ. ತನ್ನಾ ಆರೋಗ್ಯ ಸಮಸ್ಯೆಗೆ ತನ್ನ ತಾಯಿಯ ವೈದ್ಯರೇ ಕಾರಣ ಎಂದು  ಪ್ರಕರಣ ದಾಖಲಿಸಿ ಗೆದ್ದ ಘಟನೆ ಲಂಡನ್ನಲ್ಲಿ ನಡೆದಿದೆ. 
20 ವರ್ಷದ ಇವಿ ದಾಖಲಿಸಿರುವ ಮೊಕದ್ದಮೆಯನ್ನು ಆಲಿಸಿರುವ ಲಂಡನ್ ಹೈಕೋರ್ಟ್, ಇವರ ಈ ಪರಿಸ್ಥಿತಿಗೆ ಅವರ ತಾಯಿಯ ವೈದ್ಯರೇ ಕಾರಣ ಎಂದು ತೀರ್ಪುನೀಡಿದ್ದು, ಅವರಿಗೆ ಪರಿಹಾರ ನೀಡುವಂತೆ ಆದೇಶ ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಿಮೆಂಟ್ ಬೆಲೆ ಮತ್ತೆ ಹೆಚ್ಚಳ!