Select Your Language

Notifications

webdunia
webdunia
webdunia
webdunia

ಸಿಮೆಂಟ್ ಬೆಲೆ ಮತ್ತೆ ಹೆಚ್ಚಳ!

ಸಿಮೆಂಟ್ ಬೆಲೆ ಮತ್ತೆ ಹೆಚ್ಚಳ!
ಕೋಲ್ಕತ್ತಾ , ಶುಕ್ರವಾರ, 3 ಡಿಸೆಂಬರ್ 2021 (09:05 IST)
ಕೋಲ್ಕತ್ತಾ : ಕಟ್ಟಡ ನಿರ್ಮಾಣ ಚಟುವಟಿಕೆಯ ಪ್ರಮುಖ ಕಚ್ಚಾವಸ್ತುವಾದ ಸಿಮೆಂಟ್ ಬೆಲೆ ಇನ್ನು ಕೆಲ ತಿಂಗಳಿನಲ್ಲಿ ಮತ್ತಷ್ಟು ಏರಿಕೆಯಾಗಲಿದೆ.
ಪ್ರತಿ ಚೀಲ ಸಿಮೆಂಟ್ ಬೆಲೆ 15-20 ರೂಪಾಯಿ ಹೆಚ್ಚಳದ ಸಾಧ್ಯತೆ ಇದೆ ಎಂದು ರೇಟಿಂಗ್ ಏಜೆನ್ಸಿ ಕ್ರಿಸಿಲ್ ನಿನ್ನೆ ತಿಳಿಸಿದೆ. ಸಿಮೆಂಟ್ ತಯಾರಿಕೆಗೆ ಅಗತ್ಯದ ಕಚ್ಚಾವಸ್ತುಗಳ ಬೆಲೆ ಏರಿಕೆಯಿಂದಾಗಿ ಸಿಮೆಂಟ್ ದರ ಏರಿಕೆಗೆ ಕಾರಣವಾಗಲಿದೆ. 
ಈಗ ಪ್ರಸ್ತುತವಾಗಿ 360 ರಿಂದ 380ರವರೆಗೆ ಬೆಲೆಯಲ್ಲಿರುವ ಸಿಮೆಂಟ್ ಬೆಲೆ 400ರೂ. ಮುಟ್ಟಲಿದೆ.  ಹೀಗಾಗಿ 50 ಕೇಜಿ ಇರುವ ಪ್ರತಿ ಚೀಲದ ಸಿಮೆಂಟ್ ಬೆಲೆ 400 ರೂಪಾಯಿ ಮುಟ್ಟಲಿದೆ. ಈ ಮೂಲಕ ಸಿಮೆಂಟ್ ದರ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಏರಿಕೆಯಾಗಲಿದೆ ಎಂದು ವರದಿ ಹೇಳಿದೆ.
2020ರ ವೇಳೆ ಕೊರೊನಾ ಕಾರಣಕ್ಕೆ ಸಿಮೆಂಟ್ ಬೇಡಿಕೆಯಲ್ಲಿ ಕುಸಿತವಾಗಿತ್ತು. ಆದರೆ ಈ ಆರ್ಥಿಕ ವರ್ಷದಲ್ಲಿ ಸಿಮೆಂಟ್ ಬೇಡಿಕೆ ಪ್ರಮಣ ಶೇ.11ರಿಂದ 13 ರಷ್ಟು ಏರಿಕೆಯಾಗಿದೆ. ವಿದೇಶದಿಂದ ತರಿಸಲಾಗಿದ್ದ ಕಲ್ಲಿದ್ದಲು ಶೇ.120ಕ್ಕಿಂತ ಹೆಚ್ಚು ಮತ್ತು ಪೆಟ್ಕೋಕ್ ದರದ ಶೇ.80 ರಷ್ಟು ಏರಿಕೆ. ಇದರಿಂದ ವಿದ್ಯುತ್ ಮತ್ತು ಇಂಧನ ಬೆಲೆಗಳು ಪ್ರತೀ ಟನ್ಗೆ 350 ರಿಂದ 400 ರೂಪಾಯಿ ಜಿಗಿಯುವ ಸಾಧ್ಯತೆ ಇದೆ.


Share this Story:

Follow Webdunia kannada

ಮುಂದಿನ ಸುದ್ದಿ

ನೊಂದ ಪ್ರೇಮಿಗಳಿಬ್ಬರು ಆತ್ಮಹತ್ಯೆ! ಮುಂದೇನಾಯ್ತು