Select Your Language

Notifications

webdunia
webdunia
webdunia
webdunia

ಪುಟಿನ್ ಪದಚ್ಯುತಿಗೆ ರಷ್ಯಾದಲ್ಲಿ ರಹಸ್ಯ ಸಂಚು

ಪುಟಿನ್ ಪದಚ್ಯುತಿಗೆ ರಷ್ಯಾದಲ್ಲಿ ರಹಸ್ಯ ಸಂಚು
ರಷ್ಯಾ , ಮಂಗಳವಾರ, 17 ಮೇ 2022 (14:42 IST)
ರಷ್ಯಾದ ಆಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಪದಚ್ಯುತಿಗೆ ರಷ್ಯಾದಲ್ಲಿ ರಹಸ್ಯ ಸಂಚನ್ನು ರೂಪಿಸಲಾಗುತ್ತಿದೆ ಎಂದು ಉಕ್ರೇನಿನ ಸೇನಾ ಜನರಲ್ ಹೇಳಿದ್ದಾರೆ.
 
ಉಕ್ರೇನಿನ ಜ. ಕೈರಿಲೊ ಬುದಾನೊವ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ‘ರಷ್ಯಾ ಹಾಗೂ ಉಕ್ರೇನ್ ಯುದ್ಧ ವರ್ಷಾಂತ್ಯದ ಒಳಗಾಗಿ ಸಮಾಪ್ತಿಯಾಗುತ್ತದೆ. ಉಕ್ರೇನ್ ವಿರುದ್ಧ ರಷ್ಯಾ ಸೋತಲ್ಲಿ ಪುಟಿನ್ ಅವರನ್ನು ಅಧ್ಯಕ್ಷರ ಸ್ಥಾನದಿಂದ ತೆಗೆದುಹಾಕುವುದು ನಿಶ್ಚಿತವಾಗಿದೆ.

ಈ ಹಿನ್ನೆಲೆಯಲ್ಲಿ ಪುಟಿನ್ ಅವರ ಪದಚ್ಯುತಿಗಾಗಿ ಈಗಾಗಲೇ ರಷ್ಯಾದಲ್ಲಿ ಸಂಚು ನಡೆಯುತ್ತಿದೆ. ಪುಟಿನ್ ಪದಚ್ಯುತಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದಿದ್ದಾರೆ.

ಈ ನಡುವೆ ಪುಟಿನ್ ಅವರ ಅನಾರೋಗ್ಯದ ಕುರಿತು ಸಾಕಷ್ಟುವರದಿಗಳು ಕಂಡು ಬಂದ ಹಿನ್ನೆಲೆಯಲ್ಲಿ ಮಾತನಾಡಿದ ಬುದಾನೊವ್, ‘ಪುಟಿನ್ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹದಗೆಟ್ಟಿದೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚೀನಾ ಕಾರ್ಮಿಕರಿಗೆ ವೀಸಾ ನೀಡಲು ಲಂಚ: ಕಾರ್ತಿ ಚಿದಂಬರಂಗೆ ಸಿಬಿಐ ಮತ್ತೆ ಶಾಕ್