Select Your Language

Notifications

webdunia
webdunia
webdunia
webdunia

ಮಿಲಿಟರಿ ನೆರವು ಪಡೆದ ಉಕ್ರೇನ್!

ಮಿಲಿಟರಿ ನೆರವು ಪಡೆದ ಉಕ್ರೇನ್!
ಲಂಡನ್ , ಸೋಮವಾರ, 9 ಮೇ 2022 (08:31 IST)
ಲಂಡನ್ : ಯುದ್ಧಪೀಡಿತ ಉಕ್ರೇನ್ಗೆ ಬ್ರಿಟನ್ ಹೊಸದಾಗಿ 1.3 ಶತಕೋಟಿ ಪೌಂಡ್(12 ಸಾವಿರ ಕೋಟಿ ರೂ.) ಮಿಲಿಟರಿ ಸಹಾಯ ನೀಡುವುದಾಗಿ ಬ್ರಿಟನ್ ಭರವಸೆ ನೀಡಿದೆ.

ಭಾನುವಾರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಗ್ರೂಪ್ ಆಫ್ ಸೆವೆನ್ ಸಂಪರ್ಕಕ್ಕೆ ಮುಂದಾಗಿರುವುದಾಗಿ ವರದಿಗಳು ತಿಳಿಸಿವೆ.

ಫೆಬ್ರವರಿ 24 ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಆಕ್ರಮಣವನ್ನು ಪ್ರಾರಂಭಿಸಿದಾಗಿನಿಂದ ಉಕ್ರೇನ್ ಬೆಂಬಲಕ್ಕೆ ನಿಂತವರಲ್ಲಿ ಬ್ರಿಟನ್ ಅಧ್ಯಕ್ಷ ಬೋರಿಸ್ ಜಾನ್ಸನ್ ಒಬ್ಬರು. ಅಂದಿನಿಂದ ಜಾನ್ಸನ್ ಉಕ್ರೇನ್ಗೆ ಕ್ಷಿಪಣಿ, ವಾಯು ರಕ್ಷಣಾ ವ್ಯವಸ್ಥೆ ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ಕಳುಹಿಸಿದ್ದಾರೆ. 

ಬ್ರಿಟನ್ ಉಕ್ರೇನ್ಗೆ ಕಳೆದ ಬಾರಿ ನೀಡಿದ ಸಹಾಯಕ್ಕಿಂತಲೂ ಈ ಬಾರಿ ದ್ವಿಗುಣ ಪ್ರಮಾಣದಲ್ಲಿ ನೀಡಿದೆ. ಇದು ಇರಾಕ್ ಹಾಗೂ ಅಫ್ಘಾನಿಸ್ತಾನಗಳಲ್ಲಿ ನಡೆದ ಯುದ್ಧದ ವೆಚ್ಚಕ್ಕಿಂತಲೂ ಅತ್ಯಧಿಕ ದರವಾಗಿದೆ ಎಂದು ಬ್ರಿಟನ್ ಸರ್ಕಾರ ತಿಳಿಸಿದೆ. ಆದರೆ ಬ್ರಿಟನ್ ಸರಿಯಾದ ಲೆಕ್ಕಾಚಾರದ ವಿವರಗಳನ್ನು ನೀಡಿಲ್ಲ.

ಕಳೆದ ವಾರ ಜಾನ್ಸನ್ ಉಕ್ರೇನ್ ಸಂಸತ್ತಿನಲ್ಲಿ ಭಾಷಣ ಮಾಡಿ, ಉಕ್ರೇನ್ ಮೇಲಿನ ರಷ್ಯಾದ ದಾಳಿ ವಿವರಿಸಲು ಅಸಾಧ್ಯವಾದ ವಿನಾಶವನ್ನೇ ಮಾಡುತ್ತಿದೆ. ಇದು ಯುರೋಪಿನಾದ್ಯಂತ ಶಾಂತಿ ಹಾಗೂ ಭದ್ರತೆಗೆ ಬೆದರಿಕೆಯೂ ಆಗಿದೆ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮೈಕ್ ತೆರವಿಗೆ ಇಂದು ಡೆಡ್ಲೈನ್!