Publish Date: Wed, 11 May 2022 (15:24 IST)
Updated Date: Wed, 11 May 2022 (21:27 IST)
ಮಾಸ್ಕೋ : ಪ್ರೀತಿಗೆ ವಯಸ್ಸಿನ ಅಂತರವಿಲ್ಲ. ಅದು ಯಾರಿಗೆ ಯಾವಾಗ ಬೇಕಾದರೂ ಆಗಬಹುದು.
ಹಾಗೆಯೇ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ 69 ವರ್ಷದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸತತ ಉಕ್ರೇನ್ ನಡುವಿನ ಯುದ್ಧದ ಬ್ಯೂಸಿಯಲ್ಲೂ ಪ್ರೇಮಕ್ಕೂ ಸೈ ಎಂದಿದ್ದಾರೆ.
ತನ್ನ ಪ್ರೇಯಸಿ ಜಿಮ್ಪಟು ಅಲಿನಾ ಕಬೀವಾ ಜೊತೆ ಪ್ರತ್ಯಕ್ಷರಾದ ಪುಟಿನ್ ಆಕೆ ಗರ್ಭಿಣಿಯಾಗಿರುವ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ. ಜಿಮ್ ಪಟು 3ನೇ ಮಗುವಿನ ತಾಯಿಯಾಗುತ್ತಿದ್ದಾರೆ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಉಕ್ರೇನ್ ಮೇಲೆ ಸಮರ ಸಾರಿರುವ ರಷ್ಯಾ ದೊರೆಗೆ ಈ ಸುದ್ದಿ ಖುಷಿ ಕೊಟ್ಟಿಲ್ಲ ಎಂದು ಹೇಳಲಾಗುತ್ತಿದೆ.
ಈ ದಂಪತಿ ಈಗಾಗಲೇ 2 ಮಕ್ಕಳನ್ನು ಹೊಂದಿದ್ದಾರೆ. ಮುಂದಿನ ಅಕ್ಟೋಬರ್ ತಿಂಗಳಿಗೆ ಪುಟಿನ್ಗೆ 70 ವರ್ಷ ಪೂರ್ಣಗೊಳ್ಳಲಿದೆ. ಕ್ಯಾನ್ಸರ್ ಚಿಕಿತ್ಸೆಯಿಂದ ಬಳಲುತ್ತಿರುವ ಪುಟಿನ್ಗೆ ಕೆಲ ದಿನಗಳಲ್ಲೇ ಶಸ್ತ್ರಚಿಕಿತ್ಸೆ ನಡೆಯಲಿದೆ. ಈ ನಡುವೆ ಅವರು 3ನೇ ಮಗುವಿಗೆ ತಂದೆಯಾಗುತ್ತಿರುವ ವಿಷಯವನ್ನು ಬಹಿರಂಗಪಡಿಸಿದ್ದಾರೆ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ.