Select Your Language

Notifications

webdunia
webdunia
webdunia
webdunia

ಉಕ್ರೇನ್ ಯುದ್ಧದಲ್ಲಿ ಸಹಾಯ ಮಾಡಿದ ಕಿಮ್ ಜಾಂಗ್ ಉನ್ ಗೆ ರಷ್ಯಾ ಅಧ್ಯಕ್ಷ ಪುಟಿನ್ ಭರ್ಜರಿ ಉಡುಗೊರೆ

Kim Jong Un

Krishnaveni K

ಮಾಸ್ಕೊ , ಸೋಮವಾರ, 2 ಸೆಪ್ಟಂಬರ್ 2024 (12:25 IST)
ಮಾಸ್ಕೊ: ಉಕ್ರೇನ್ ವಿರುದ್ಧ ಯುದ್ಧದಲ್ಲಿ ಬಳಸಲು ಮದ್ದು ಗುಂಡು ನೀಡಿ ಸಹಾಯ ಮಾಡಿದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿಶೇಷ ಉಡುಗೊರೆ ನೀಡಿದ್ದಾರೆ.

ಉಕ್ರೇನ್ ಮತ್ತು ರಷ್ಯಾ ನಡುವೆ ಕಳೆದ ಎರಡು ವರ್ಷಗಳಿಂದ ಯುದ್ಧ ಮುಂದುವರಿಯುತ್ತಲೇ ಇದೆ. ಯುದ್ಧ ಎಂದರೆ ಒಂದು ದೇಶವನ್ನು ಆರ್ಥಿಕವಾಗಿ ಸಾಕಷ್ಟು ಸಂಕಷ್ಟಕ್ಕೀಡು ಮಾಡುತ್ತದೆ. ಸಾಕಷ್ಟು ಮದ್ದು ಗುಂಡುಗಳ ಅವಶ್ಯಕತೆಯೂ ಬರುತ್ತದೆ. ಇದೀಗ ರಷ್ಯಾಗೆ ಉತ್ತರ ಕೊರಿಯಾ ನೆರವು ನೀಡಿತ್ತು.

ರಷ್ಯಾಗೆ ಬೇಕಾಗಿದ್ದ ಮದ್ದು ಗುಂಡುಗಳನ್ನು ನೀಡಿ ಸಹಾಯ ಮಾಡಿದ್ದಕ್ಕೆ ವ್ಲಾಡಿಮಿರ್ ಪುಟಿನ್ ವಿಶೇಷ ಉಡುಗೊರೆ ನೀಡಿ ಕೃತಜ್ಞತೆ ಸಲ್ಲಿಸಿದ್ದಾರೆ. ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಗೆ ಪ್ಯೂರ್ ಬ್ರೆಡ್ ತಳಿಯ 24 ಕುದುರೆಗಳನ್ನು ಉಡುಗೊರೆಯಾಗಿ ನೀಡಿ ಕೃತಜ್ಞತೆ ಸಲ್ಲಿಸಿದ್ದಾರೆ.

ಕಿಮ್ ಜಾನ್ ಗೆ ಕುದುರೆ ಮೇಲೆ ವಿಶೇಷ ಒಲವಿದೆ. ಎರಡು ವರ್ಷಗಳ ಹಿಂದೆಯೂ ಪುಟಿನ್ ಈ ರೀತಿ ಕುದುರೆಗಳನ್ನು ಉಡುಗೊರೆಯಾಗಿ ನೀಡಿದ್ದರು. ಪ್ಯೂರ್ ಬ್ರೆಡ್ ತಳಿಯ ಕುದುರೆಗಳು ಅತ್ಯಂತ ವೇಗವಾಗಿ ಓಡಬಲ್ಲವು ಮತ್ತು ಶಕ್ತಿಶಾಲೀ ಕುದುರೆಗಳಾಗಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಡೆಬಿಟ್ ಕಾರ್ಡ್ ಇಲ್ಲದೇ ಎಟಿಎಂನಲ್ಲಿ ಹಣ ಜಮೆ ಮಾಡುವುದು ಹೇಗೆ ಇಲ್ಲಿದೆ ವಿಧಾನ