ಉತ್ತರ ಕೊರಿಯಾ-ಉತ್ತರ ಕೊರಿಯಾ... ಇದು ಕಿಮ್ ಜಾನ್ ಉನ್‌ನ ನೆಲ... ಇಲ್ಲಿ ಇವನೇ ಹೇಳಿದ ಕಾನೂನು ಮಾತ್ರ ಜಾರಿ ಅಲ್ಲಿ ಇರಬೇಕು ಅನ್ನೋದು ಇಲ್ಲಿನ ರೂಢಿ ನಿಯಮ.... ಹಾಗಾದ್ರೆ ಕಿಮ್ ಜಾಂಗ್ ಉನ್‌ನ ಉತ್ತರ ಕೊರಿಯಾದಲ್ಲಿ ಏನಾಗ್ತಿದೆ... ಯಾಕ್ ಅಲ್ಲಿನ ಜನರು ಮಂಕಾಗಿದ್ದಾರೆ.... ಸದ್ಯಕ್ಕೆ ಜಗತ್ತಿನ ಕುತೂಹಲವೇ ಇದು..!?
ಸರ್ವಾಧಿಕಾರಿ ಕಿಮ್‌ನ ನೆಲದಲ್ಲಿ ಎಲ್ಲವೂ ಅದ್ವಾನಾವಾಗ್ತಿದೆ.. ಅಲ್ಲಿನ ನಾಗರಿಕರ ಮೇಲೆ ಈ ಹುಚ್ಚು ಮಾನವ ಬೇಕಾಬಿಟ್ಟಿ ಕಾನೂನು, ನೀತಿ ಅದು ಇದು ಅಂತ ಜಾರಿಗೆ ತಂದು ಇನ್ನಿಲ್ಲದ ಸಂಕಷ್ಟವನ್ನ ಅಲ್ಲಿನ ಮಂದಿಗೆ ತಂದಿಟ್ಟಿದ್ದಾನಾ.?
ಉತ್ತರ ಕೊರಿಯಾದಲ್ಲಿ ಚಿತ್ರ ವಿಚಿತ್ರವಾದ ಕಾನೂನುಗಳು ಆಗಾಗೆ ರ‍್ತಾನೆ ರ‍್ತಾನೆ ಈ ಕಿಮ್. ಹಾಗಾಗಿಯೆ ಇಲ್ಲಿನವರ ಪಾಡು ಹೇಳಿಕೊಳ್ಳೋದಕ್ಕೂ ಆಗದೇ ಸುಮ್ಮನೆ ಇರೋದಕ್ಕೂ ಆಗದೆ, ಹಾಗೆ ಕೈ ಕಟ್ಟಿ ಕೂರುವಂತೆ ಆಗಿ ಬಿಟ್ಟಿದೆ.ಬಹುಶಃ ನಾರ್ಥ್ ಕೊರಿಯಾದಲ್ಲಿ ಹೀಗೆಲ್ಲಾ ಆಗುತ್ತಿದ್ದರೂ, ಇಡೀ ಜಗತ್ತು ಸುಮ್ಮನೇ ಹಾಗೆ ಗಮನಿಸೋದನ್ನ ಬಿಟ್ಟರೇ, ಮತ್ತೇನನ್ನೂ ಮಾಡೋದಕ್ಕೆ ಆಗುತ್ತಿಲ್ಲ. ಯಾಕಂದ್ರೆ ಅವಾ ಮೊದಲೆ ತಲೆ ಕೆಟ್ಟ ಮನುಷ್ಯ. ಹುಚ್ಚು ದೊರೆ... ಅವನೇಳಿದ್ದೆ ಅಲ್ಲಿ ಫೈನಲ್ ಆಗಬೇಕೆಂಬ ಹುಂಬುತನ. ಹಾಗಾಗಿ ಇಲ್ಲಿನ ಮಂದಿಗೆ ಇನ್ನಿಲ್ಲದ ಟೆನ್ಷನ್ ಶುರುವಾಗಿದೆ...
ಉತ್ತರ ಕೊರಿಯಾದಲ್ಲಿ ಏನೇನೋ ಕಾನೂನು ಕಟ್ಟಳೆಗಳು ಜಾರಿಯಲ್ಲಿವೆ.ಅಸ್ತಿತ್ವದಲ್ಲಿವೆ ಅನ್ನೋದಕ್ಕಿಂತ ಕಿಮ್‌ನ ರೀತಿ ನಿಯಮಗಳೇ ಹಾಗೆ, ಅದಕ್ಕಾಗಿ ಆ ದೇಶವನ್ನ ಹಾಗೆ ಮಾಡಿಟ್ಟಿವೆ ಹೌದು... ಇಲ್ಲಿನ ಸರ್ವಾಧಿಕಾರಿ ಕಿಮ್ ಹೇಳ್ತಾನೇ, ಉತ್ತರ ಕೊರಿಯಾದಲ್ಲಿ ವಿದೇಶಿ ಹಾಡು ಹಾಡಂಗಿಲ್ಲ, ಹಾಗೆ ಕೇಳಂಗಿಲ್ಲ... ಇದರ ಜೊತೆಗೆ ವಿದೇಶಿ ಸಿನಿಮಾಗಳನ್ನು ಅಪ್ಪಿತಪ್ಪಿಯೂ ನೋಡಲೇಬಾರದಂತೆ.
ಹಾಗೇನಾದರೂ ನೀತಿ ನಿಯಮಗಳನ್ನು ಮೀರಿದ್ದೇ ಆದಲ್ಲಿ, ಆಗ ಆ ನೆಲದಲ್ಲಿ ಕಾನೂನು ಉಲ್ಲಂಘನೆ ಆದಂತೆ. ಮುಖ್ಯವಾಗಿ ತನ್ನ ಶತ್ರು ರಾಷ್ಟ್ರಗಳಾದ ಅಮೆರಿಕ ಹಾಗೂ ದಕ್ಷಿಣ ಕೊರಿಯಾದ ಯಾವುದೇ ಹಾಡು ಅಥವಾ ಸಿನಿಮಾಗಳನ್ನು ವೀಕ್ಷಿಸಿದ್ದು ಗೊತ್ತಾದಲ್ಲಿ ಆ ವ್ಯಕ್ತಿಗೆ ಮರಣದಂಡನೆ ವಿಧಿಸಲಾಗುತ್ತದೆ.
ಬೈ ಚಾನ್ಸ್ ಏನಾದರೂ ಉತ್ತರಕೊರಿಯಾದ ಮಂದಿ, ದೂರದ ದೇಶದಲ್ಲಿನ ವ್ಯಕ್ತಿಗಳಿಗೆ ಪೋನ್ ಮಾಡಿದರೊ ಅಲ್ಲಿಗೆ ಅವರ ಕಥೆ ಫಿನಿಶ್. ಇದು ಇಲ್ಲಿನ ಕಿಮ್‌ನ ನೆಲದ ಕಾನೂನಿಗೆ ವಿರುದ್ಧ ಅದೆಂಥ ವಿಚಿತ್ರ ಮನುಷ್ಯ ಈ ಕಿಮ್ ಅಂದ್ರೆ, ನೋಡಿ, ಪಾಪ ಹಾಕೋ ಬಟ್ಟೆಗೂ ಕೊಕ್ಕೆ ಹಾಕ್ತಾನೆ. ನೀಲಿ ಜಿನ್ಸ್ ಪ್ಯಾಂಟ್ ಹಾಕಲೆಬಾರದಂತೆ, ನೀಲಿ ಬಣ್ಣದ ಜಿನ್ಸ್ ಅಂದ್ರೆನೆ ಇವನಿಗೆ ಇರುಸು ಮುರಿಸು ಅಂತೆ... ಅಬ್ಬಬ್ಬಾ ಅದೇನೂ ಅಸಾಮಿಯಪ್ಪಾ ಈ ಉನ್....?