Select Your Language

Notifications

webdunia
webdunia
webdunia
Monday, 31 March 2025
webdunia

ಹೊಸ ವರ್ಷಕ್ಕೆ ಪ್ರಧಾನಿ ಮೋದಿಗೆ ರಷ್ಯಾ ಅಧ್ಯ ಕ್ಷ ಪುಟಿನ್ ವಿಶೇಷ ವಿಶ್

ನ್ಯೂ ಇಯರ್ 2024
ನವದೆಹಲಿ , ಭಾನುವಾರ, 31 ಡಿಸೆಂಬರ್ 2023 (11:12 IST)
ನವದೆಹಲಿ: ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಕೆಲವೇ ಕ್ಷಣಗಳು ಬಾಕಿಯಿದ್ದು, ಜಾಗತಿಕ ನಾಯಕರು ಈಗಾಗಲೇ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ವಿಶೇಷವಾಗಿ ಹೊಸ ವರ್ಷಕ್ಕೆ ಶುಭಾಶಯ ಕೋರಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮುಗೂ ಪುಟಿನ್ ಶುಭಾಶಯ ಸಂದೇಶ ಕಳುಹಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಉದ್ವಿಗ್ನ ಪರಿಸ್ಥಿತಿಗಳು ಎದುರಾದರೂ ಭಾರತ ಮತ್ತು ರಷ್ಯಾ ನಡುವಿನ ಸ್ನೇಹ ಸಂಬಂಧ ವೃದ್ಧಿಯಾಗಿದೆ. ಕಳೆದ ವರ್ಷ ನಮ್ಮ ಎರಡೂ ರಾಷ್ಟ್ರಗಳ ನಡುವಿನ ವಾಣಿಜ್ಯ, ವ್ಯವಹಾರಗಳು ಅತ್ಯುತ್ತಮ ಮಟ್ಟದಲ್ಲಿತ್ತು’ ಎಂದು ಪುಟಿನ್ ಸಂದೇಶದಲ್ಲಿ ತಿಳಿಸಿದ್ದಾರೆ.

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಸಂದರ್ಭದಲ್ಲಿ ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷ ಪುಟಿನ್ ಗೆ ಬೆಂಬಲ ನೀಡಿದ್ದರು. ಮೋದಿ ಕಾಲಾವಧಿಯಲ್ಲಿ ರಷ್ಯಾ ಜೊತೆಗೆ ಹಲವು ಒಪ್ಪಂದಗಳನ್ನೂ ಮಾಡಿಕೊಳ್ಳಲಾಗಿತ್ತು. ಹೀಗಾಗಿ ಪುಟಿನ್ ತನ್ನ ಸ್ನೇಹಿತ ರಾಷ್ಟ್ರದ ನಾಯಕರಿಗೆ ವಿಶೇಷ ಸಂದೇಶ ಕಳುಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಸದ ಪ್ರತಾಪ್ ಸಿಂಹ ಸಹೋದರ ಅರೆಸ್ಟ್