Select Your Language

Notifications

webdunia
webdunia
webdunia
webdunia

ಉಕ್ರೇನ್ ಮೇಲೆ ರಷ್ಯಾ ದಾಳಿ ಬೆನ್ನಲ್ಲೇ ಪುಟಿನ್ ಜೊತೆ ಮೋದಿ ಖಡಕ್ ಮಾತು

Vladimir Putin-PM Modi

Krishnaveni K

ನವದೆಹಲಿ , ಮಂಗಳವಾರ, 27 ಆಗಸ್ಟ್ 2024 (17:06 IST)
ನವದೆಹಲಿ: ತಮ್ಮ ಭೇಟಿಯ ಬೆನ್ನಲ್ಲೇ ಉಕ್ರೇನ್ ಮೇಲೆ ರಷ್ಯಾ ವೈಮಾನಿಕ ದಾಳಿ ನಡೆಸಿರುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಮಾತುಕತೆ ನಡೆಸಿದ್ದಾರೆ.

ಮೊನ್ನೆಯಷ್ಟೇ ಪ್ರಧಾನಿ ಮೋದಿ ಉಕ್ರೇನ್ ಗೆ ಭೇಟಿ ನೀಡಿದ್ದರು. ಈ ವೇಳೆ ರಷ್ಯಾ ಜೊತೆಗೆ ನಡೆಯುತ್ತಿರುವ ಬಹುಕಾಲದ ಯುದ್ಧ ನಿಲ್ಲಿಸಲು ಭಾರತದ ಪ್ರಧಾನಿ ಮೋದಿಯಿಂದ ಮಾತ್ರ ಸಾಧ್ಯ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದರು. ಉಕ್ರೇನ್ ಯುದ್ಧಪೀಡಿತ ಸ್ಥಳಗಳಿಗೆ ಭೇಟಿ ಕೊಟ್ಟಿದ್ದ ಮೋದಿ ಅಲ್ಲಿನ ಪರಿಸ್ಥಿತಿ ಕಂಡು ಭಾವುಕರಾಗಿದ್ದರು.

ಮೋದಿ ಭಾರತಕ್ಕೆ ಬರುತ್ತಲೇ ರಷ್ಯಾ ಮತ್ತೆ ಉಕ್ರೇನ್ ಮೇಲೆ ಭಾರೀ ದಾಳಿ ನಡೆಸಿದೆ. ಇದರ ಬೆನ್ನಲ್ಲೇ ಈಗ ಮೋದಿ ತನ್ನ ಮಿತ್ರ ರಾಷ್ಟ್ರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಮಾತುಕತೆ ನಡೆಸಿದ್ದಾರೆ. ಉಕ್ರೇನ್ ನ ಪರಿಸ್ಥಿತಿ ಬಗ್ಗೆ ಈ  ವೇಳೆ ವಿವರಿಸಿರುವುದಾಗಿ ಮೋದಿ ಹೇಳಿದ್ದಾರೆ.

‘ಇಂದು ರಷ್ಯಾ ಅಧ್ಯಕ್ಷರ ಜೊತೆ ಮಾತುಕತೆ ನಡೆಸಿದ್ದೇನೆ. ಉಕ್ರೇನ್ ನ ಸ್ಥಿತಿಗತಿ ಬಗ್ಗೆ ವಿವರಿಸಿದ್ದೇನೆ. ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿ ಸ್ಥಾಪನೆ ಅಗತ್ಯ ಎಂದು ಹೇಳಿದ್ದೇನೆ. ಈ ಬಗ್ಗೆ ಭಾರತದ ನಿಲುವನ್ನೂ ಸ್ಪಷ್ಟಪಡಿಸಿದ್ದೇನೆ’ ಎಂದು ಮೋದಿ ಸೋಷಿಯಲ್ ಮೀಡಿಯಾ ಎಕ್ಸ್ ಪೇಜ್ ನಲ್ಲಿ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವೇದಿಕೆಯಲ್ಲೇ ಜಯದೇವ ಆಸ್ಪತ್ರೆ ನಿರ್ದೇಶಕರಿಗೆ ಕರೆ ಮಾಡಿದ ಸಿಎಂ ಸಿದ್ದರಾಮಯ್ಯ