ಡ್ರಿಂಕ್ ಆ್ಯಂಡ್ ಡ್ರೈವ್ ಕೇಸ್ ಮೇಲೆ ಬಂಧಿಸಿದ ವ್ಯಕ್ತಿಯನ್ನು ನೋಡಿ ಪೊಲೀಸರು ಶಾಕ್!

ಶನಿವಾರ, 26 ಅಕ್ಟೋಬರ್ 2019 (07:05 IST)
ವಾಷಿಂಗ್ಟನ್ : ಮದ್ಯ ಸೇವಿಸಿ ವಾಹನ ಚಲಾಯಿಸಿದ್ದಾನೆ ಎಂದು ಬಂಧಿಸಿದ ವ್ಯಕ್ತಿಯ ದೇಹದಲ್ಲಿ ಮದ್ಯ ಉತ್ಪಾದನೆಯಾಗುತ್ತಿರುವ ವಿಚಿತ್ರ ಘಟನೆ ಕೇಳಿ ಎಲ್ಲರೂ ಅಚ್ಚರಿಗೊಂಡಿದ್ದಾರೆ.
ಹೌದು. ಉತ್ತರ ಕರೋಲಿನಾದ ವ್ಯಕ್ತಿಯೊಬ್ಬನನ್ನು ಪೊಲೀಸರು ಕುಡಿದು ಕಾರು ಚಲಾಯಿಸಿದ್ದಾನೆ ಎಂದು ಬಂಧಿಸಿದ್ದಾರೆ. ಆದರೆ ಆತ ತಾನು ಕುಡಿದಿಲ್ಲ ಎಂದು ವಾದಿಸಿದ್ದಾನೆ. ಆದಕಾರಣ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ.


ಆತನ  ದೇಹದಲ್ಲಿರುವ ಎಲ್ಲ ಕಾರ್ಬೋಹೈಡ್ರೇಟ್ ಗಳು ಬಿಯರ್ ಆಗಿ ಪರಿವರ್ತಿಸುವ ಶಿಲೀಂದ್ರ ಆತನ ದೇಹದಲ್ಲಿರುವ ವಿಚಾರ ಇದೀಗ ತಿಳಿದುಬಂದಿದೆ. ಈ ಕಾಯಿಲೆಗೆ ಆಟೋ-ಬ್ರಿವೆರಿ ಸಿಂಡ್ರೋಮ್(ಎಬಿಎಸ್) ಎನ್ನಲಾಗಿದೆ, ಇದೀಗ ಆತನಿಗೆ ನ್ಯೂಯಾರ್ಕ್ ನ ವೈದ್ಯಕೀಯ ಕೇಂದ್ರವೊಂದರಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಈಗ ಆತನ ದೇಹ ಸುಧಾರಿಸಿಕೊಂಡಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇನ್ನುಮುಂದೆ ಈ ದೇಶಕ್ಕೆ ಹೋಗಲು ವೀಸಾ ಬೇಕಾಗಿಲ್ಲ!