Select Your Language

Notifications

webdunia
webdunia
webdunia
webdunia

ಸಕ್ಕರೆ ಕಾರ್ಖಾನೆ ಪಕ್ಕದಲ್ಲೇ ಅಕ್ರಮ ಮದ್ಯ ಮಾರಾಟ ದಂಧೆ

ಸಕ್ಕರೆ ಕಾರ್ಖಾನೆ ಪಕ್ಕದಲ್ಲೇ ಅಕ್ರಮ ಮದ್ಯ ಮಾರಾಟ ದಂಧೆ
ಮಂಡ್ಯ , ಮಂಗಳವಾರ, 15 ಅಕ್ಟೋಬರ್ 2019 (15:37 IST)
ಸಕ್ಕರೆ ನಾಡು ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆ ಹತ್ತಿರದಲ್ಲೇ ಅಪಾರ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಮಂಡ್ಯ ಜಿಲ್ಲೆಯ ಕಿಕ್ಕೇರಿ  ಪೊಲೀಸ್ ಠಾಣೆಯ  ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿ ನಡೆಯುತ್ತಿದೆ.

ಇದರ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಕಿಕ್ಕೇರಿ ವ್ಯಾಪ್ತಿಗೆ ಬರುವ ಪೊಲೀಸರ ಗಮನಕ್ಕೆ ಬಂದರೂ ಅಕ್ರಮ ಮದ್ಯ ಮಾರಾಟ ದಂಧೆ ಯಾವುದೇ ಹೆದರಿಕೆಯಿಲ್ಲದೇ ನಡೆಯುತ್ತಿದೆ ಎನ್ನಲಾಗಿದೆ.

ಕೋರಮಂಡಲ ಸಕ್ಕರೆ ಕಾರ್ಖಾನೆ ಬಳಿ ಪತ್ರಿ ದಿನ ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ.

ರಾತ್ರಿ 12 ಗಂಟೆವರೆಗೂ ಇಲ್ಲಿ ಮದ್ಯ ಸಿಗುತ್ತದೆ. ಈ ಅಕ್ರಮ ಮದ್ಯ ಮಾರಾಟ ತಡೆಯಬೇಕಾದ ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ವಿಷಯ ಗೊತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಅಂತ ಅಲ್ಲಿನ ಜನರು ದೂರಿದ್ದಾರೆ. ಸುಮಾರು ಹತ್ತಕ್ಕೂ ಹೆಚ್ಚು ಅಂಗಡಿಗಳಲ್ಲಿ ಅಕ್ರಮ ಮದ್ಯಮಾರಾಟ ನಡೆಯುತ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಲವ್ ಮಾಡದಿದ್ರೆ ರೇಪ್ ಮಾಡ್ತೀನಿ ಎಂದ ಯುವಕ