Select Your Language

Notifications

webdunia
webdunia
webdunia
webdunia

ಶಾಸಕರ ಸಂಬಂಧಿಯಿಂದ ದೌರ್ಜನ್ಯ - ಮುಖ್ಯಾಧಿಕಾರಿಗೆ ಕೊಲೆ ಬೆದರಿಕೆ

webdunia
ಮಂಗಳವಾರ, 8 ಅಕ್ಟೋಬರ್ 2019 (18:13 IST)
ಮಾಜಿ ಶಾಸಕರ ಸಂಬಂಧಿಯೊಬ್ಬರು ಅಧಿಕಾರಿಯೊಬ್ಬರಿಗೆ ಜೀವ ಬೆದರಿಕೆ ಹಾಕಿರೋ ಘಟನೆ ನಡೆದಿದೆ.

ಪುರಸಭೆ ಮುಖ್ಯಾಧಿಕಾರಿಗೆ ಕೊಲೆ ಬೆದರಿಕೆ ಹಾಕಿ ಹಲ್ಲೆಗೆ ಮುಂದಾಗಿದ್ದಾರೆ ಮಾಜಿ ಶಾಸಕನ ಸಂಬಂಧಿ.

ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್ ಸಂಬಂಧಿಯಿಂದ ಸರ್ಕಾರಿ ಅಧಿಕಾರಿ‌ ಮೇಲೆ  ದೌರ್ಜನ್ಯ ನಡೆದಿದೆ.
ಮಂಡ್ಯ ಜಿಲ್ಲೆಯ  ಕೆ.ಆರ್.ಪೇಟೆ ಪಟ್ಟಣದಲ್ಲಿ‌ ಘಟನೆ ನಡೆದಿದ್ದು, ಕೆ.ಆರ್.ಪೇಟೆ ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್ ಸಹೋದರಿಯ ಪುತ್ರ ಕೆ.ಟಿ. ಚಕ್ರಪಾಣಿಯಿಂದ ದೌರ್ಜನ್ಯ ನಡೆದಿದೆ.

ಮಂಡ್ಯ  ಕೆ.ಆರ್.ಪೇಟೆ ಪಟ್ಟಣದ ಮಾಜಿ ಪುರಸಭೆ ಅಧ್ಯಕ್ಷ ಕೆ.ಟಿ. ಚಕ್ರಪಾಣಿ, ಸರ್ಕಾರಿ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದ್ದರು. ಈ ವೇಳೆ ತಡೆಯಲು ಹೋಗಿದ್ದಾರೆ ಪುರಸಭೆ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿಗಳು.

ಆದರೆ ಅಧಿಕಾರಿಗೆ ಕೊಲೆ ಬೆದರಿಕೆ ಒಡ್ಡಿ, ಸಿಬ್ಬಂದಿಗಳ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಚಕ್ರಪಾಣಿ ಮತ್ತವರ ಬೆಂಗಲಿಗರು.
ಪುರಸಭೆ ಮುಖ್ಯಾಧಿಕಾರಿ ಸತೀಶ್ ರಿಂದ ಕೆ.ಟಿ. ಚಕ್ರಪಾಣಿ ಹಾಗೂ ಬೆಂಬಲಿಗರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.
Share this Story:

Follow Webdunia Hindi

ಮುಂದಿನ ಸುದ್ದಿ

ಸಡಗರದ ಶೋಭಾಯಾತ್ರೆ – ಅದ್ಧೂರಿ ತೆರೆ ಕಂಡ ಮಂಗಳೂರು ದಸರಾ