Publish Date: Tue, 17 Sep 2019 (19:26 IST)
Updated Date: Tue, 17 Sep 2019 (19:28 IST)
ನ್ಯಾಯವಾದಿಗಳ ಮೇಲಾಗುತ್ತಿರುವ ಹಲ್ಲೆಗಳನ್ನು ತಡೆಯಬೇಕು ಎಂಬ ಒತ್ತಾಯ ಕೇಳಿಬಂದಿದೆ.
ನ್ಯಾಯವಾದಿಗಳ ಮೇಲೆ ಆಗುತ್ತಿರುವ ಹಲ್ಲೆ ತಡೆಯಬೇಕು ಮತ್ತು ಹಲ್ಲೆಕೋರರನ್ನ ಬಂಧಿಸಿ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಬೆಳಗಾವಿ ಬಾರ ಅಸೋಶಿಯೇಷನ್ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು
ವಿಜಯಪುರದ ನ್ಯಾಯವಾದಿ ಚಾಂದ ಕೋಟೆ ಮತ್ತು ಬೆಳಗಾವಿ ಜಿಲ್ಲೆಯ ನ್ಯಾಯವಾದಿ ಎಸ್.ಬಿ.ಹೊಟ್ಟಿ ಮೇಲೆ ಹಲ್ಲೆಗಳಾಗಿದ್ದು, ಕೂಡಲೆ ಹಲ್ಲೆಕೋರರನ್ನು ಬಂಧಿಸಿ ಕಾನೂನುನಡಿಯಲ್ಲಿ ಶಿಕ್ಷೆ ನೀಡಬೇಕು. ನ್ಯಾಯವಾದಿ ಮೇಲೆ ಹಲ್ಲೆಯಾಗದಂತೆ ಭದ್ರತೆಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಬಾರ ಅಸೋಸಿಯೇಷನ್ ಅಧ್ಯಕ್ಷ ಏ.ಜಿ. ಮುಳವಾಡಮಠ, ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ನ್ಯಾಯವಾದಿಗಳ ಮೇಲೆ ನಿರಂತರವಾಗಿ ಹಲ್ಲೆಗಳು ನಡೆಯುತ್ತಲೇ ಇವೆ. ಹಲ್ಲೆಕೋರರನ್ನು ಬಂಧಿಸುವಂತೆ ಮತ್ತು ನ್ಯಾಯವಾದಿಗಳಿಗೆ ಭದ್ರತೆ ನೀಡುವಂತೆ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ.
ಈ ವಿಷಯದ ಕುರಿತು ಚರ್ಚಾಸಭೆಗೂ ನಮ್ಮನ್ನು ಅಹ್ವಾನಿಸಿಲ್ಲ. ಇನ್ನು ಮುಂದೆ ಯಾವುದಾದರು ಹಲ್ಲೆಗಳು ಜರುಗಿದರೆ ಅದಕ್ಕೆ ಜಿಲ್ಲಾಡಳಿತವೇ ಕಾರಣವಾಗುತ್ತದೆ ಎಂದರು.