ಅಡಿಕೆ ತೋಟದಲ್ಲಿ ಬಿದ್ದ ಜೆಟ್ ವಿಮಾನ

ಮಂಗಳವಾರ, 17 ಸೆಪ್ಟಂಬರ್ 2019 (19:19 IST)
ರಾಜ್ಯದಲ್ಲಿ ಮಾನವ ರಹಿತ ಜೆಟ್ ವಿಮಾನ ನೆಲಕ್ಕುರುಳಿ ಪತನಗೊಂಡಿರೋ ಘಟನೆ ನಡೆದಿದೆ.

ಚಿತ್ರದುರ್ಗ ತಾಲೂಕಿನ ಜೋಡಿಚಿಕ್ಕೇನಹಳ್ಳಿ ಗ್ರಾಮದ ಅಡಿಕೆ ತೋಟದಲ್ಲಿ ಜೆಟ್ ವಿಮಾನ ಬಿದ್ದಿದೆ.

ಡಿಆರ್ ಡಿಒ ನಿಂದ ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದ ವೇಳೆ ಕೆಳಗುರುಳಿರುವ ಶಂಕೆ ವ್ಯಕ್ತವಾಗಿದೆ.
ಮಾನವ ರಹಿತ ಜೆಟ್ ವಿಮಾನ ಇದಾಗಿದ್ದು, ನೆಲಕ್ಕುರುಳಿ ಪತನಗೊಂಡಿದೆ.

ಮಾನವರಹಿತ ಯುದ್ಧ ವಿಮಾನಗಳ ಸಂಶೋಧನೆ ನಡೆಸುತ್ತಿರುವ DRDO ಗೆ ಸೇರಿದ್ದು ಎನ್ನಲಾಗಿದೆ.

ಚಳ್ಳಕೆರೆ ತಾಲೂಕು ಕುದಾಪುರ ಸಮೀಪ ಇರುವ DRDO ನಿಂದ ಈ ಹಿಂದೆ ಎರಡು ಬಾರಿ ಪರಿಕ್ಷಾರ್ಥ ಹಾರಾಟದ ವೇಳೆ ನೆಲಕ್ಕುರುಳಿತ್ತು ಡ್ರೋಣ್.

ರುಸ್ತುಂ ಹೆಸರಿನ ಡ್ರೋಣ್ ಮಾದರಿಯ ಮಾನವರಹಿತ ವಿಮಾನ ಇದಾಗಿದೆ. ಬೆಳಗ್ಗೆ 8ಗಂಟೆ ಸುಮಾರಿಗೆ ಜೋಡಿಚಿಕ್ಕೇನಹಳ್ಳಿ ಬಳಿ ನೆಲಕ್ಕುರುಳಿದೆ ಜೆಟ್ ವಿಮಾನ.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅನಾರೋಗ್ಯ ಅಂತ ಯುವಕ ಹೀಗೆ ಮಾಡೋದಾ