Select Your Language

Notifications

webdunia
webdunia
webdunia
webdunia

ಮೈತ್ರಿ ಸರಕಾರ ಪತನಕ್ಕೆ ಮುಂದುವರಿದ ಯತ್ನ

ಮೈತ್ರಿ ಸರಕಾರ ಪತನಕ್ಕೆ ಮುಂದುವರಿದ ಯತ್ನ
ಬೆಂಗಳೂರು , ಗುರುವಾರ, 20 ಜೂನ್ 2019 (16:26 IST)
ಲೋಕಸಮರಕ್ಕಾಗಿ ಒಂದಷ್ಟು ದಿನ ತೆರೆಮರೆಗೆ ಸರಿದಿದ್ದ ಆಪರೇಷನ್ ಕಮಲ ಚಟುವಟಿಕೆ ಈಗ ತೀವ್ರಗೊಂಡಿದೆ ಎಂಬ ಚರ್ಚೆ ಶುರುವಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಅದ್ಭುತ ಜಯ ದಾಖಲು ಮಾಡಿರುವ ಬಿಜೆಪಿ ಕೇಂದ್ರದಲ್ಲಿ ಸರಕಾರ ರಚನೆ ಮಾಡಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ಮೈತ್ರಿ ಸರಕಾರ ಪತನಕ್ಕೆ ಸ್ಕೆಚ್ ರೆಡಿಮಾಡುತ್ತಿದೆ. ರಾಜ್ಯದ ಸರಕಾರದ ಸಂಪುಟ ವಿಸ್ತರಣೆ, ಕೈ ಹಾಗೂ ತೆನೆ ಪಕ್ಷಗಳ ಶಾಸಕರ ಅಸಮಧಾನವನ್ನೇ ಬಿಜೆಪಿ ಟಾರ್ಗೆಟ್ ಮಾಡುತ್ತಿದ್ದು, ಆಯಾ ಶಾಸಕರಿಗೆ ಸದ್ದಿಲ್ಲದೇ ಗಾಳ ಹಾಕುತ್ತಿದೆ ಎಂಬ ವಿಷಯ ಹರಿದಾಡುತ್ತಿದೆ.

ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೂಡ ಇದನ್ನು ಹೇಳಿದ್ದು, ಬಿಜೆಪಿ ಆಪರೇಷನ್ ಕಮಲ ಮುಂದುವರಿಸಿದೆ ಎಂದು ದೂರಿದ್ದಾರೆ.
ಲೋಕಸಮರದ ಫಲಿತಾಂಶ ಬಳಿಕ ಮೈತ್ರಿ ಸರಕಾರ ತಾನಾಗಿಯೇ ಪತನಗೊಳ್ಳುತ್ತದೆ ಎಂದು ಬಿಜೆಪಿ ನಾಯಕರು ಭಾವಿಸಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಹೀಗಾಗಿ ಮೈತ್ರಿ ಪಕ್ಷಗಳ ಅತೃಪ್ತರನ್ನ ಬಿಜೆಪಿಗೆ ಸೇರ್ಪಡೆಗೊಳಿಸಿಕೊಳ್ಳಲು ಕಮಲ ಪಾಳೆಯ ಸನ್ನದ್ಧಗೊಂಡಿದೆ.

ಬಿ.ಎಸ್.ಯಡಿಯೂರಪ್ಪ ಕಳೆದ ವಾರ ದೆಹಲಿಗೆ ತೆರಳಿದ್ದಾಗ ಅಮಿತ್ ಶಾ ಭೇಟಿ ಬಳಿಕ ಕಮಲ ಪಾಳೆಯ ಮತ್ತಷ್ಟು ರಾಜ್ಯದಲ್ಲಿ ಚುರುಕಾಗಿದೆ. ಅತೃಪ್ತ ಶಾಸಕರೇ ಈಗ ಬಿಜೆಪಿ ಸೇರಲು ಸಿದ್ಧರಾಗಿರುವಾಗ ವಿಳಂಬ ಮಾಡುವುದಕ್ಕೆ ಬಿಜೆಪಿಗೆ ಇಷ್ಟವಿಲ್ಲ ಎನ್ನಲಾಗುತ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಆಪರೇಷನ್ ಕಮಲ ಸದ್ದಿಲ್ಲದೇ ನಡೆಯುತ್ತಿದೆ; ಸಿಎಂ ಹೊಸ ಬಾಂಬ್