ಆಪರೇಷನ್ ಕಮಲ ಸದ್ದಿಲ್ಲದೇ ನಡೆಯುತ್ತಿದೆ; ಸಿಎಂ ಹೊಸ ಬಾಂಬ್

ಗುರುವಾರ, 20 ಜೂನ್ 2019 (16:14 IST)
ರಾಜ್ಯದ ಮೈತ್ರಿ ಸರಕಾರ ಅಸ್ಥಿರಗೊಳಿಸಲು ಆಪರೇಷನ್ ಕಮಲ ಈಗಲೂ ನಡೆಯುತ್ತಿದೆ. ಹೀಗಂತ ಸಿಎಂ ಹೊಸ ಬಾಂಬ್ ಸಿಡಿಸಿದ್ದಾರೆ.

ಇವತ್ತಿಗೂ ಆಪರೇಷನ್ ಕಮಲದಂತಹ ಚಟುವಟಿಕೆಗಳು ನಡೆಯುತ್ತಿವೆ. ಹೀಗಂತ ಮುಖ್ಯಮಂತ್ರಿ ಹೆಚ್.ಡಿ.ಕುಮಾಸ್ವಾಮಿ ಹೇಳಿದ್ದಾರೆ. ರಾಜ್ಯ ಸರಕಾರದ ಒಂದು ವರ್ಷದ ಸಾಧನೆ ತಿಳಿಸಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಬಿಜೆಪಿ ವ್ಯರ್ಥ ಪ್ರಯತ್ನ ಮಾಡುತ್ತಲೇ ಇದೆ.

ಕಳೆದೊಂದು ವರ್ಷದಿಂದ ಸರಕಾರ ಉರುಳಿಸೋಕೆ ಯತ್ನಿಸುತ್ತಲೇ ಇದೆ. ಆದರೆ ಅದು ಸಾಧ್ಯವಾಗಿಲ್ಲ ಎಂದಿದ್ದಾರೆ.

ಯಡಿಯೂರಪ್ಪ ಶಾಸಕರಿಗೆ ಆಮಿಷ ಒಡ್ಡಿರುವ ಆಡಿಯೋ ಇದೆ. ಈ ಬಗ್ಗೆ ಹೆಚ್ಚು ಹೇಳಲ್ಲ. ಮಾಧ್ಯಮದವರಿಗೆ ಎಲ್ಲವೂ ಗೊತ್ತಿದೆ ಎಂದರು. ರಾಜ್ಯ ಸರಕಾರ ಸುಭದ್ರವಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ರು.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಲಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಅರೆಸ್ಟ್