Select Your Language

Notifications

webdunia
webdunia
webdunia
webdunia

ಮಲಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಅರೆಸ್ಟ್

ಮಲಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಅರೆಸ್ಟ್
ಅಹ್ಮದಾಬಾದ್ , ಗುರುವಾರ, 20 ಜೂನ್ 2019 (16:09 IST)
ಮಹಿಳೆಯರಿಗೆ ಪೇಯಿಂಗ್ ಗೆಸ್ಟ್ ಸೌಲಭ್ಯ ಒದಗಿಸುತ್ತಿರುವ ಅಪಾರ್ಟ್‌ಮೆಂಟ್‌ಗೆ ನುಗ್ಗಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಪಾರ್ಟ್‌ಮೆಂಟ್‌ನಲ್ಲಿರುವ ಸಿಸಿಟಿವಿ ಪರಿಶೀಲಿಸಿದ ನಂತರ ಡೆಲಿವರಿ ಬಾಯ್ ಆಗಿರುವ ಭಾವಿನ್ ಶಾನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾಕೆ ಎಂದು ನವರಂಗಪುರ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
 
ನವಂರಗಪುರ ಬಡಾವಣೆಯಲ್ಲಿರುವ ಕಮಲನಯನ ಅಪಾರ್ಟ್‌‌ಮೆಂಟ್‌ನಲ್ಲಿ ಮನೆಯೊಂದರ ಬಾಗಿಲು ತೆರೆದಿರುವುದು ಕಂಡು ಮಧ್ಯರಾತ್ರಿ ನುಗ್ಗಿದ ಭಾವಿನ್ ಶಾ, ಡ್ರಾಯಿಂಗ್ ರೂಮ್‌ನಲ್ಲಿ ಸೋಫಾದಲ್ಲಿ ಮಲಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.ಇದನ್ನು ಕಂಡ ಮತ್ತೊಬ್ಬ ಮಹಿಳೆ ಜೋರಾಗಿ ಕೂಗಿ ಬೇರೆಯವರನ್ನು ಎಚ್ಚರಿಸಿದ್ದಾಳೆ. ಬೆಚ್ಚಿ ಬಿದ್ದ ಆರೋಪಿ ಭಾವಿನ್ ಶಾ ಅಲ್ಲಿಂದ ಪರಾರಿಯಾಗಿದ್ದಾನೆ.
 
ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಲ್ ಬಾಟಮ್ ಗೆ 125 ನೇ ದಿನದ ಸಂಭ್ರಮ