Publish Date: Thu, 20 Jun 2019 (14:34 IST)
Updated Date: Thu, 20 Jun 2019 (14:36 IST)
ಮಾಜಿ ಸಿಎಂ ಸಿದ್ದರಾಮಯ್ಯ ಸ್ಥಿತಿ ಇಂದು ಅತಂತ್ರವಾಗಿದೆ. ಕಾಂಗ್ರೆಸ್ ಒಡೆದು ಛಿದ್ರವಾಗುತ್ತಿದೆ. ಹೀಗಂತ ಮಾಜಿ ಡಿಸಿಎಂ ಆರೋಪ ಮಾಡಿದ್ದಾರೆ.
ಮಲ್ಲೇಶ್ವರಂದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾಜಿ ಡಿಸಿಎಂ ಆರ್. ಅಶೋಕ್ ಹೇಳಿಕೆ ನೀಡಿದ್ದು, ಕಾಂಗ್ರೆಸ್ ನಲ್ಲಿ ಯಾರೂ ಸಿದ್ದರಾಮಯ್ಯ ಅವ್ರಿಗೆ ಬೆಲೆ ಕೊಡದಂತಾಗಿದೆ. ಕಾಂಗ್ರೆಸ್ ನಾಯಕರು ಗುಂಪುಗಾರಿಕೆ ಮಾಡಿಕೊಂಡು ಹೊಡೆದಾಡ್ತಿದ್ದಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ ಮಣ್ಣುಮುಕ್ಕಿದೆ ಎಂದರು.
ರಾಜ್ಯದಲ್ಲಿ ಮೈತ್ರಿ ಮಾಡ್ಕೊಂಡು ಹಾಳಾಗಿ ಹೋಗಿದೆ. ಹೊಸ ಸಚಿವರಿಗೆ ಖಾತೆ ಕೊಡದೇ ಖ್ಯಾತೆ ಮಾಡ್ತಿದ್ದಾರೆ ಎಂದರು.
ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಅಮಾನತು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಜೆಡಿಎಸ್ ಸಹವಾಸ ಮಾಡಿ ಕಾಂಗ್ರೆಸ್ ಧೂಳಿಪಟ ಆಗಿದೆ. ಯಾವಾಗಲೂ ಸಿದ್ದರಾಮಯ್ಯ ಮೋದಿ, ಯಡಿಯೂರಪ್ಪ ಅವರಿಗೆ ಏಕವಚನ ಪ್ರಯೋಗ ಮಾಡ್ತಿದ್ದರು.
ಈಗ ಅವರದೇ ಪಕ್ಷದ ಶಾಸಕ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ಕರೆಯುವ ಸ್ಥಿತಿ ತಲುಪಿದೆ. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಸ್ಥಿತಿ ಅತಂತ್ರ ಆಗಿದೆ. ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆ ಆರಂಭವಾಗಿದೆ. ಕಾಂಗ್ರೆಸ್ ಒಡೆದು ಮಣ್ಣುಪಾಲಾಗುವುದು ಖಚಿತ ಎಂದರು.