Select Your Language

Notifications

webdunia
webdunia
webdunia
webdunia

ರೋಷನ್ ಬೇಗ್ ಗೆ ಸಿದ್ದರಾಮಯ್ಯ ಖಡಕ್ ತಿರುಗೇಟು

ರೋಷನ್ ಬೇಗ್
ನಾನು‌ ಸಿದ್ದು ಕಾಂಗ್ರೆಸ್ ನಲ್ಲಿಲ್ಲ, ಇಂಡಿಯನ್ ಕಾಂಗ್ರೆಸ್ ನಲ್ಲಿದ್ದೇನೆ. ಹೀಗಂತ ರೋಷನ್ ಬೇಗ್ ನೀಡಿರೋ ಹೇಳಿಕೆಗೆ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.

ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ದರಾಮಯ್ಯ ಮಾತನಾಡಿದ್ದು, ನಾವೆಲ್ಲರೂ ಇಂಡಿಯನ್ ಕಾಂಗ್ರೆಸ್ ನಲ್ಲಿ‌ ಇದ್ದೇವೆ.
ರೋಷನ್ ಬೇಗ್ ಎಲ್ಲಿದ್ದಾರೋ ಗೊತ್ತಿಲ್ಲ. ರೋಷನ್ ಬೇಗ್ ರನ್ನ ಸಸ್ಪೆಂಡ್ ಮಾಡಿರುವುದು ಕಾಂಗ್ರೆಸ್ ಪಕ್ಷ. ನಾನು ಅವರನ್ನು ಪಕ್ಷದಿಂದ ಸಸ್ಪೆಂಡ್ ಮಾಡಿಲ್ಲ ಎಂದರು.

ಇನ್ನ ಹೆಚ್.ವಿಶ್ವನಾಥ್ ಹೇಳಿಕೆಗಳಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಜಿಂದಾಲ್ ಪ್ರಕರಣದ ಬಗ್ಗೆ ಸಿಎಂ ಜೊತೆ ಚರ್ಚೆ ವಿಶ್ವನಾಥ್ ಚರ್ಚೆ ಮಾಡಲಿ. ನಾನೇಕೆ ಮಾತನಾಡಬೇಕು? ನನ್ನ ಹೆಸರನ್ನು ಏಕೆ ಪ್ರಸ್ತಾಪಿಸುತ್ತಾರೆ? ನಾನು ಜಾರ್ಜ್ ಜೊತೆ ಮಾತನಾಡಿ ಪರಿಶೀಲಿಸುವಂತೆ ಹೇಳಿದ್ದೇನೆ ಎಂದರು.

ಇನ್ನು, ಪಕ್ಷೇತರರಿಗೆ ಖಾತೆ ಕೊಡುವ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಖಾತೆ ಕೊಡಬೇಕಾದವರು ಮುಖ್ಯಮಂತ್ರಿ.
ಪಕ್ಷವೊಂದರ ರಾಜ್ಯಾಧ್ಯಕ್ಷರಾಗಿ ಈ ಬೇಸಿಕ್ ತಿಳ್ಕೊಬೇಕು. ಖಾತೆ ಹಂಚುವಂತೆ ಸಿಎಂ ಜೊತೆ ಚರ್ಚೆ ಮಾಡಲಿ. ವಿಶ್ವನಾಥ್ ಹೇಳಿಕೆಗಳಿಗೆಲ್ಲಾ ಪ್ರತಿಕ್ರಿಯೆ ಕೊಡಲ್ಲ ಎಂದರು. ಅವರು ರಾಮಲಿಂಗ ರೆಡ್ಡಿ ಭೇಟಿ ಬಗ್ಗೆಯೂ ಏನೂ ಮಾತನಾಡೊಲ್ಲ ಎಂದು ದೆಹಲಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಭೇಟಿ ಮಾಡಿದ ಮಲ್ಲಿಕಾರ್ಜುನ ಖರ್ಗೆ ಹೀಗ್ಯಾಕೆ ಹೇಳಿದ್ರು?