ಅನಾರೋಗ್ಯ ಅಂತ ಯುವಕ ಹೀಗೆ ಮಾಡೋದಾ

ಮಂಗಳವಾರ, 17 ಸೆಪ್ಟಂಬರ್ 2019 (19:14 IST)
ಅನಾರೋಗ್ಯದಿಂದ ಬಳಲುತ್ತಿದ್ದ ಯುವಕನೊಬ್ಬ ವಿಷದ ಮಾತ್ರೆ ನುಂಗಿದ್ದಾನೆ.

ಮಾತ್ರೆ ನುಂಗಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯದ ಮಾಕವಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಪುಟ್ಟೇಗೌಡ ಎಂಬುವರ ಮಗ ವಿಜಯ್(23) ಆತ್ಮಹತ್ಯೆಗೆ ಶರಣಾದವನು.

ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದನ ವಿಜಯ. ಆರೋಗ್ಯ ಚೇತರಿಸಿಕೊಳ್ಳದೆ ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮನೆಯಲ್ಲೇ ವಿಷದ ಮಾತ್ರೆ ಸೇವಿಸಿದ್ದ ವಿಜಯ್ ನನ್ನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.  

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ