Select Your Language

Notifications

webdunia
webdunia
webdunia
webdunia

ಪತ್ನಿಯ ಅಕ್ರಮ ಸಂಬಂಧ ಪ್ರಶ್ನಿಸಿದ ಪತಿಗೆ ಆಮೇಲೆ ಆಗಿದ್ದೇನು ಗೊತ್ತಾ?

ಪತ್ನಿಯ ಅಕ್ರಮ ಸಂಬಂಧ ಪ್ರಶ್ನಿಸಿದ ಪತಿಗೆ ಆಮೇಲೆ ಆಗಿದ್ದೇನು ಗೊತ್ತಾ?
ಬೆಂಗಳೂರು , ಮಂಗಳವಾರ, 8 ಅಕ್ಟೋಬರ್ 2019 (11:19 IST)
ಬೆಂಗಳೂರು : ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ ಪತಿಯನ್ನು, ಪತ್ನಿಯ ಪ್ರಿಯಕರ ಗುಂಡಿಕ್ಕಿ ಕೊಂದ ಘಟನೆ ಆನೇಕಲ್ ತಾಲೂಕಿನ ಶ್ರೀರಾಂಪುರದಲ್ಲಿ ನಡೆದಿದೆ.




ರಮೇಶ್ ಕೊಲೆಯಾದ ಪತಿ, ಮುನಿಯಪ್ಪ ಕೊಲೆ ಮಾಡಿದ ಪತ್ನಿಯ ಪ್ರಿಯಕರ. ಪತ್ನಿ ಹಾಗೂ ಮುನಿಯಪ್ಪನ ನಡುವೆ ಅಕ್ರಮ ಸಂಬಂಧವಿದ್ದ ವಿಚಾರ ತಿಳಿದ ರಮೇಶ್ ಕೋಪದಿಂದ ಹೆಂಡತಿಯನ್ನು ಪ್ರಶ್ನಿಸಿದ್ದಾನೆ. ಇದರಿಂದ ರೊಚ್ಚಿಗೆದ್ದ  ಆಕೆಯ ಪ್ರಿಯಕರ ಮುನಿಯಪ್ಪ ಸೋಮವಾರ ಮಧ್ಯರಾತ್ರಿ ರಮೇಶ್ ಮೇಲೆ ಸಿಂಗಲ್ ಬ್ಯಾರೆಲ್ ಗನ್‍ ನಿಂದ ಗುಂಡು ಹಾರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.


ರಸ್ತೆ ಮಧ್ಯೆ ರಮೇಶ್ ಮೃತದೇಹವನ್ನು ಕಂಡ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮುನಿಯಪ್ಪ ಅವರಿಗಾಗಿ  ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ವರ್ಷ ಬಿಎಸ್ ವೈ ನೇತೃತ್ವದಲ್ಲಿ ಇನ್ನೂ ಚೆನ್ನಾಗಿ ದಸರಾ ಆಚರಿಸುತ್ತೇವೆ- ಸಚಿವ ವಿ. ಸೋಮಣ್ಣ ವಿಶ್ವಾಸ