ಫಿಲಿಪ್ಪೀನ್ಸ್ : ಎರಡು ದಿನಗಳ ಹಿಂದೆಯಷ್ಟೇ ಫಿಲಿಪ್ಪೀನ್ಸ್‌ನ ಮೇಯರ್ ಆಂಟೋನಿಯೊ ಹಲೀಲಿ ಎಂಬುವವರನ್ನು ದುಷ್ಕರ್ಮಿಯೊಬ್ಬ  ಗುಂಡಿಕ್ಕಿ ಹತ್ಯೆಮಾಡಿದ್ದನು, ಅದೇರೀತಿ ಇದೀಗ ಮತ್ತೊಬ್ಬ ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದ ಉತ್ತರದಲ್ಲಿರುವ ಪಟ್ಟಣವೊಂದರ ಮೇಯರ್ ನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
									
			
			 
 			
 
 			
			                     
							
							
			        							
								
																	
ನುಯೇವ ಎಸಿಜ ಪ್ರಾಂತದ ರಾಜಧಾನಿಯಲ್ಲಿರುವ ಸರಕಾರಿ ಕಚೇರಿಯಿಂದ 57 ವರ್ಷದ ಮೇಯರ್ ಫರ್ಡಿನಂಡ್ ಬೋಟೆ ಅವರು ತನ್ನ ಚಾಲಕನೊಂದಿಗೆ ಹೊರಬರುತ್ತಿರುವಾಗ ಬಂದೂಕುಧಾರಿಗಳು ಅವರ ಕಾರಿನ ಸಮೀಪ ಬಂದು ಗುಂಡು ಹಾರಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
									
										
								
																	
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ