Select Your Language

Notifications

webdunia
webdunia
webdunia
webdunia

ಮಗುವಿನ ಕತ್ತು ಕೊಯ್ದು ಹಲ್ಲೆ ನಡೆಸಿದ ಅಂಗನವಾಡಿ ಶಿಕ್ಷಕಿ!

ಮಗುವಿನ ಕತ್ತು ಕೊಯ್ದು ಹಲ್ಲೆ ನಡೆಸಿದ ಅಂಗನವಾಡಿ ಶಿಕ್ಷಕಿ!
ದೊಡ್ಡಬಳ್ಳಾಪುರ , ಬುಧವಾರ, 4 ಜುಲೈ 2018 (18:44 IST)
ಆ ಪುಟ್ಟ ಮಗು ಎಂದಿನಂತೆ ಅಂಗನವಾಡಿಗೆ ಹೋಗಿತ್ತು. ಸರಿ ತಪ್ಪು ಏನು ಅಂತ ಗೊತ್ತಿರದ ವಯಸ್ಸು ಆತನದ್ದು. ಅಂಗನವಾಡಿಯಲ್ಲಿ ಪಾಠ ಮಾಡಿ ಮಗುವಿಗೆ ಶಿಸ್ತು ಕಲಿಸಬೇಕಾದ ಶಿಕ್ಷಕಿಯೇ ಆ ಮಗುವಿನ ಪಾಲಿಗೆ ವಿಲನ್ ಆಗಿದ್ದು, ಮಗುವಿನ ಕತ್ತು ಕೊಯ್ದು ಹಲ್ಲೆ ನಡೆಸಿದ್ದಾಳೆ.
 
ಅಂಗನವಾಡಿ ಶಿಕ್ಷಕಿಯೊಬ್ಬರು ಮಗುವೊಂದರ ಕತ್ತನ್ನು ಬ್ಲೇಡ್ ನಿಂದ ಕೊಯ್ದು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ದೊಡ್ಡಬಳ್ಳಾಪುರ ತಾಲೂಕಿನ ಕಸಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪೃಥ್ವಿರಾಜ್(7) ಹಲ್ಲೆಗೆ ಒಳಗಾದ ಬಾಲಕನಾಗಿದ್ದಾನೆ. ಕಸಘಟ್ಟ ಅಂಗನವಾಡಿ ಶಿಕ್ಷಕಿ ಮುನಿಯಮ್ಮ ಪುಟ್ಟ ಮಗುವಿನ ಕತ್ತು ಕೊಯ್ದು ಹಲ್ಲೆ ನಡೆಸಿದ್ದಾಳೆ. 
 
ಮುನಿಯಮ್ಮಳ ಕೃತ್ಯಕ್ಕೆ ಪೋಷಕರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಬೈಕ್ ನಿಂದ ಪುಟಿದು ನದಿಗೆ ಬಿದ್ದ ಬಾಲಕಿ; ರಕ್ಷಣೆಗೆ ನದಿಗೆ ಹಾರಿದ ತಂದೆ ಸಾವು