Select Your Language

Notifications

webdunia
webdunia
webdunia
webdunia

ದಲಿತ-ಸವರ್ಣಿಯರ ನಡುವೆ ಗಲಾಟೆ; ಸ್ಥಳದಲ್ಲಿ ಬಿಗುವಿನ ವಾತಾವರಣ

ದಲಿತ-ಸವರ್ಣಿಯರ ನಡುವೆ ಗಲಾಟೆ; ಸ್ಥಳದಲ್ಲಿ ಬಿಗುವಿನ ವಾತಾವರಣ
ಸುರಪುರ , ಶುಕ್ರವಾರ, 29 ಜೂನ್ 2018 (16:57 IST)
ಜನುಮ ದಿನದ ಆಚರಣೆ ಎಂದರೆ ವಿಶೇಷ ಇರಲೇಬೇಕು. ಕೇಕ್, ಸ್ವೀಟ್ಸ್, ಬ್ಯಾನರ್ ಕಟ್ಟುವುದು ಈಗ ಮಾಮೂಲಿ ಎಂಬಂತಾಗಿದೆ. ಆದರೆ ಜನ್ಮದಿನಾಚರಣೆಗೆ ಬ್ಯಾನರ್ ಕಟ್ಟಿದ್ದಕ್ಕಾಗಿ ಗಲಾಟೆ ನಡೆದಿದೆ. ಅಷ್ಟೇ ಅಲ್ಲ ದಲಿತ - ಸವರ್ಣಿಯರ ನಡುವಿನ ಜಗಳದಲ್ಲಿ ಇಬ್ಬರ ಮೇಲೆ ಹಲ್ಲೆಯಾಗಿದೆ. 
ಬ್ಯಾನರ್ ವಿಚಾರವಾಗಿ ಹಲ್ಲೆ ನಡೆದ ಘಟನೆ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಹಂದ್ರಾಳ (ಎಸ್ ಡಿ) ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ದೇವರಾಜ್(33) ಚಂದ್ರಮ್ಮ(45) ಎಂಬುವರ ಮೇಲೆ ಹಲ್ಲೆ ನಡೆಸಲಾಗಿದೆ.

ಗಂಗಣ್ಣ, ಶರಣಗೌಡ ಸೇರಿದಂತೆ ಆರು ಜನರು ದಲಿತರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹಂದ್ರಾಳ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಈ ಕುರಿತು ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ದಂಪತಿ ದೇಹದಾನ; ಸಾರ್ಥಕತೆ ಮೆರೆದ ಕುಟುಂಬ