Select Your Language

Notifications

webdunia
webdunia
webdunia
webdunia

ವರ್ಗಾವಣೆ ಮಾಡುವಂತೆ ಕೇಳಿದಕ್ಕೆ ಶಿಕ್ಷಕಿಯನ್ನು ಅಮಾನತುಗೊಳಿಸಿ, ಅರೆಸ್ಟ್ ಮಾಡಿಸಿದ ಉತ್ತರಾಖಂಡ್​ ಮುಖ್ಯಮಂತ್ರಿ

ವರ್ಗಾವಣೆ ಮಾಡುವಂತೆ ಕೇಳಿದಕ್ಕೆ ಶಿಕ್ಷಕಿಯನ್ನು ಅಮಾನತುಗೊಳಿಸಿ, ಅರೆಸ್ಟ್ ಮಾಡಿಸಿದ ಉತ್ತರಾಖಂಡ್​ ಮುಖ್ಯಮಂತ್ರಿ
ಉತ್ತರಾಖಂಡ್ , ಶುಕ್ರವಾರ, 29 ಜೂನ್ 2018 (15:20 IST)
ಉತ್ತರಾಖಂಡ್​ : ಉತ್ತರಾಖಂಡ್​ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್​ ರಾವತ್ ಅವರು ವರ್ಗಾವಣೆ ಬೇಕೆಂದು ಪ್ರತಿಭಟಿಸಿದ ಶಿಕ್ಷಕಿಯೊಬ್ಬರನ್ನು ಅಮಾನತುಗೊಳಿಸಿ, ಬಂಧಿಸುವಂತೆ ಸೂಚಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ಸಿಎಂ ತ್ರಿವೇಂದ್ರ ಗುರುವಾರ 'ಜನತಾ ದರ್ಬಾರ್'​ ​ಹಮ್ಮಿಕೊಂಡಿದ್ದರು. ಈ ವೇಳೆ ಶಿಕ್ಷಿಕ ಉತ್ತರಾ ಬಹುಗುಣ ಎಂಬುವವರು ಕಳೆದ ೨೫ ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುತ್ತಿದ್ದು ಅಲ್ಲಿಂದ ಬೇರೆಡೆಗೆ ವರ್ಗಾಯಿಸುವಂತೆ ಕೇಳಿಕೊಂಡರು. ಸಿಎಂ ಅದನ್ನು ನಿರಾಕರಿಸಿದಾಗ ಆ ಶಿಕ್ಷಕಿ ಅವ್ಯಾಚ ಶಬ್ದಗಳಿಂದ ಸಿಎಂ ಅವರನ್ನು ನಿಂದಿಸಿ ಪ್ರತಿಭಟಿಸಿದ್ದಾರೆ. ಇದರಿಂದ ಕೋಪಗೊಂಡ  ಸಿಎಂ ತ್ರಿವೇಂದ್ರ ಸಿಂಗ್​ ರಾವತ್ ಅವರು ಆಕೆಯನ್ನು ತಕ್ಷಣವೇ ಅಮಾನತುಗೊಳಿಸಿ, ಬಂಧಿಸುವಂತೆ ಸೂಚಿಸಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎಫ್‌ಎಟಿಎಫ್ ಅಧಿಕೃತವಾಗಿ ಪಾಕಿಸ್ತಾನವನ್ನು ‘ಗ್ರೇ ಲಿಸ್ಟ್' ಗೆ ಸೇರಿಸಲು ಕಾರಣವೇನು?