Publish Date: Thu, 14 Jun 2018 (09:16 IST)
Updated Date: Thu, 14 Jun 2018 (09:18 IST)
ಬೆಂಗಳೂರು: ಸಾಲಮನ್ನಾ ಮಾಡುವಂತೆ ಆಗ್ರಹಿಸಿ ವಿವಿಧ ಕಡೆಯಿಂದ ರೈತರು ಇಂದು ಬೆಳಿಗ್ಗೆಯೇ ಸಿಎಂ ಕುಮಾರಸ್ವಾಮಿ ಭೇಟಿಗೆ ಆಗಮಿಸಿದ್ದಾರೆ.
ಬೆಂಗಳೂರಿನಲ್ಲಿರುವ ಸಿಎಂ ಎಚ್ ಡಿಕೆ ನಿವಾಸಕ್ಕೆ ಆಗಮಿಸಿದ ರೈತರು 2002 ರಿಂದ ನಂತರ ರೈತರು ವಿವಿಧ ಬ್ಯಾಂಕ್ ಗಳಲ್ಲಿ ಮಾಡಿದ ಸಂಪೂರ್ಣ ಸಾಲ ಮನ್ನಾ ಮಾಡಿ ಎಂದು ಆಗ್ರಹಿಸಿದ್ದಾರೆ.
ಕೆಲವೇ ದಿನಗಳಲ್ಲಿ ಸಿಎಂ ತಮ್ಮ ಸರ್ಕಾರದ ಮೊದಲ ಬಜೆಟ್ ಮಂಡಿಸಲಿದ್ದು, ಈ ಸಂದರ್ಭದಲ್ಲಿ ಸಾಲಮನ್ನಾ ವಿಚಾರಕ್ಕೆ ಆದ್ಯತೆ ನೀಡುವ ನಿರೀಕ್ಷೆಯಿದೆ. ಈ ಮೊದಲು ಸಿಎಂ ರೈತ ನಾಯಕರೊಂದಿಗೂ ಈ ಕುರಿತಾಗಿ ಸಭೆ ನಡೆಸಿದ್ದರು. ಈ ಹಿನ್ನಲೆಯಲ್ಲಿ ಇದೀಗ ರೈತರ ನಿಯೋಗದ ಮನವಿಗೆ ಬಜೆಟ್ ನಲ್ಲಿ ಸಿಎಂ ಯಾವ ರೀತಿ ಸ್ಪಂದಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.