Daily Horoscope

Select Your Language

Notifications

webdunia
webdunia
webdunia
webdunia

ಸಿಎಂ ಕುಮಾರಸ್ವಾಮಿಗೆ ಫಿಟ್ನೆಸ್ ಚಾಲೆಂಜ್ ಹಾಕಿದ ಪ್ರಧಾನಿ ಮೋದಿ

ಸಿಎಂ ಕುಮಾರಸ್ವಾಮಿ
ನವದೆಹಲಿ: ಇತ್ತೀಚೆಗೆ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಶುರು ಮಾಡಿದ್ದ ಫಿಟ್ನೆಸ್ ಚಾಲೆಂಜ್ ಅಭಿಯಾನದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ ಸಿಎಂ ಕುಮಾರಸ್ವಾಮಿಗೆ ಸವಾಲು ಸ್ವೀಕರಿಸಲು ಆಹ್ವಾನವಿತ್ತಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರಧಾನಿ ಮೋದಿಗೆ ಫಿಟ್ನೆಸ್ ಸವಾಲು ಹಾಕಿದ್ದರು. ಅದರಂತೆ ಆಹ್ವಾನ ಸ್ವೀಕರಿಸಿದ ಪ್ರಧಾನಿ ಮೋದಿ ತಮ್ಮ ಬೆಳಗಿನ ವ್ಯಾಯಾಮದ ವಿಡಿಯೋ ಟ್ವಿಟರ್ ಮೂಲಕ ಪ್ರಕಟಿಸಿದ್ದಲ್ಲದೆ, ಕರ್ನಾಟಕ ಸಿಎಂ ಕುಮಾರಸ್ವಾಮಿ ಮತ್ತು 40 ವರ್ಷ ದಾಟಿದ ಎಲ್ಲಾ ಐಪಿಎಸ್ ಅಧಿಕಾರಿಗಳಿಗೆ ಸವಾಲು ಹಾಕಿದ್ದಾರೆ.

ಕುಮಾರಸ್ವಾಮಿ ಕೂಡಾ ತಮ್ಮ ದೇಹದ ಆರೋಗ್ಯಕ್ಕಾಗಿ ಕೆಲವು ದೈಹಿಕ ಕಸರತ್ತು ನಡೆಸುವುದಾಗಿ ಈ ಮೊದಲು ಹೇಳಿಕೊಂಡಿದ್ದರು. ಇದೀಗ ಸಿಎಂ ಕುಮಾರಸ್ವಾಮಿ ಪ್ರಧಾನಿ ಮೋದಿ ಆಹ್ವಾನವನ್ನು ಸ್ವೀಕರಿಸುತ್ತಾರಾ ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಎಚ್ ಡಿಕೆ ವಿರುದ್ಧ ದರ್ಶನ್ ಖಾತೆ ಹೆಸರಲ್ಲಿ ಟ್ರೋಲ್