Publish Date: Thu, 14 Jun 2018 (08:28 IST)
Updated Date: Thu, 14 Jun 2018 (08:29 IST)
ಬೆಂಗಳೂರು: ಫ್ರಧಾನಿ ಮೋದಿ ಟ್ವಿಟರ್ ಮೂಲಕ ತಮಗೆ ನೀಡಿದ ಫಿಟ್ನೆಸ್ ಚಾಲೆಂಜ್ ಗೆ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಆದರೆ ಪ್ರಧಾನಿ ಸವಾಲು ಸ್ವೀಕರಿಸಿ ಯೋಗ ಮಾಡುವ ವಿಡಿಯೋ ಪ್ರಕಟಿಸಿಲ್ಲ. ಬದಲಿಗೆ ಮಾತಿನ ಮೂಲಕವೇ ಪ್ರತಿಕ್ರಿಯೆ ನೀಡಿದ್ದಾರೆ.
‘ನಿಮ್ಮ ಆಹ್ವಾನವನ್ನು ಆದರಿಸುತ್ತೇನೆ ಮತ್ತು ಧನ್ಯವಾದ ಸಲ್ಲಿಸುತ್ತೇನೆ. ಯೋಗ ಮತ್ತು ಟ್ರೆಡ್ ಮಿಲ್ ನನ್ನ ದೈನಂದಿನ ವ್ಯಾಯಾಮದ ಭಾಗ. ಹಾಗಿದ್ದರೂ ನಾನು ರಾಜ್ಯದ ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದೇನೆ ಮತ್ತು ಅದಕ್ಕೆ ನಿಮ್ಮ ಬೆಂಬಲ ಕೋರುತ್ತೇನೆ’ ಎಂದು ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.