Select Your Language

Notifications

webdunia
webdunia
webdunia
webdunia

370 ನೇ ವಿಧಿ ರದ್ದು: ಕಾಂಗ್ರೆಸ್ ಗೆ ಬೆಂಬಲ ಎಂದ ಪಾಕಿಸ್ತಾನದಿಂದ ಕೈ ನಾಯಕರಿಗೆ ಮುಜುಗರ

Pakistan minister Asif

Krishnaveni K

ನವದೆಹಲಿ , ಶುಕ್ರವಾರ, 20 ಸೆಪ್ಟಂಬರ್ 2024 (11:03 IST)
Photo Credit: Facebook
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370 ನೇ ವಿಧಿ ರದ್ದು ಮರುಸ್ಥಾಪನೆ ಮಾಡುವ ವಿಚಾರದಲ್ಲಿ ಕಾಂಗ್ರೆಸ್ ನಿಲುವಿಗೆ ನಮ್ಮ ಬೆಂಬಲವಿದೆ ಎಂದು ಪಾಕಿಸ್ತಾನ ಹೇಳಿತ್ತು. ಅದೀಗ ಕೈ ನಾಯಕರಿಗೆ ಮುಜುಗರ ತಂದಿದೆ.

ಮೊದಲೇ ಬಿಜೆಪಿ ಕಾಂಗ್ರೆಸ್ ಗೆ ಪಾಕಿಸ್ತಾನ ಬೆಂಬಲಿತ ಪಕ್ಷ ಎಂದು ಕಾಲೆಳೆಯುತ್ತಿದೆ. ಇದರ ನಡುವೆ ಈಗ ಪಾಕ್ ನಾಯಕರು ಇಂತಹದ್ದೊಂದು ಹೇಳಿಕೆ ನೀಡಿ ಪಕ್ಷವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಅದರಲ್ಲೂ ಕಾಶ್ಮೀರದಲ್ಲಿ ಚುನಾವಣೆ ಸಂದರ್ಭದಲ್ಲಿ ಇಂತಹ ಹೇಳಿಕೆ ಪಕ್ಷಕ್ಕೆ ಡ್ಯಾಮೇಜ್ ಆಗುವ ಭೀತಿ ಎದುರಾಗಿದೆ.

ಇನ್ನು, ಪಾಕಿಸ್ತಾನ ಬೆಂಬಲಿಸಿದ ಘೋಷಿಸಿದ ಬೆನ್ನಲ್ಲೇ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ಮನೋಜ್ ತಿವಾರಿ, ನಮ್ಮ ದೇಶದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಬೇಕಾಗಿಲ್ಲ ಎಂದು ಎಚ್ಚರಿಕೆ ನೀಡಿದೆ. ಇದನ್ನೇ ಅಸ್ತ್ರವಾಗಿರಿಸಿರುವ ಪ್ರಧಾನಿ ಮೋದಿ, ಕಾಂಗ್ರೆಸ್ ಮತ್ತು ಪಾಕಿಸ್ತಾನದ ಅಜೆಂಡಾ ಒಂದೇ ಎಂದು ಈಗ ಬಯಲಾಗಿದೆ ಎಂದಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಈಗ ಚುನಾವಣೆ ಸಮಯವಾಗಿದ್ದು, ಪಾಕಿಸ್ತಾನವೂ ಈ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ತನ್ನ ಲಾಭಕ್ಕೆ ಹೇಗೆ ಬಳಸಿಕೊಳ್ಳಬಹುದು ಎಂದು ಲೆಕ್ಕಾಚಾರ ಹಾಕುತ್ತಿದೆ. ಹೀಗಾಗಿ ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ ಬಿಡುಗಡೆ ಮಾಡಿರುವ ಪ್ರಣಾಳಿಕೆಗೆ ಪಾಕಿಸ್ತಾನದ ಸಚಿವ ಆಸಿಫ್ ಸಹಮತ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿನ್ನ ನೋಡಿದ್ರೆ ಮೈ ಝುಮ್ ಅನ್ನುತ್ತೆ, ಗೋಡೌನ್ ನಲ್ಲಿ ಮಹಿಳೆಗೆ ಮುನಿರತ್ನ ಮಾಡಿದ್ದೇನು