Publish Date: Wed, 04 Sep 2024 (12:35 IST)
Updated Date: Wed, 04 Sep 2024 (12:37 IST)
ಇಸ್ಲಾಮಾಬಾದ್: ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿ ಸೋತ ಬಳಿಕ ಪಾಕಿಸ್ತಾನ ಸ್ಟಾರ್ ಕ್ರಿಕೆಟಿಗ ಬಾಬರ್ ಅಜಮ್ ಮೇಲೆ ಟೀಕೆಗಳ ಸುರಿಮಳೆಯಾಗುತ್ತಿದೆ. ಹೀಗಾಗಿ ಈಗ ಬಾಬರ್ ಅಭಿಮಾನಿಗಳು ವಿರಾಟ್ ಕೊಹ್ಲಿಗೆ ಸಹಾಯ ಮಾಡಲು ಮನವಿ ಮಾಡುತ್ತಿದ್ದಾರೆ.
ಈ ಹಿಂದೆ ಕೊಹ್ಲಿ ಕಳಪೆ ಫಾರ್ಮ್ ನಲ್ಲಿದ್ದಾಗ ಬಾಬರ್ ಅವರನ್ನು ಬೆಂಬಲಿಸಿ ಮಾತನಾಡಿದ್ದರು. ಅದೇ ರೀತಿ ಕೊಹ್ಲಿಯೂ ಹಿಂದೊಮ್ಮೆ ಬಾಬರ್ ಕಳಪೆ ಫಾರ್ಮ್ ನಲ್ಲಿದ್ದಾಗ ಸೋಷಿಯಲ್ ಮೀಡಿಯಾದಲ್ಲಿ ಬೆಂಬಲ ವ್ಯಕ್ತಪಡಿಸಿದ್ದರು. ಈಗ ಮತ್ತೆ ಬಾಬರ್ ಫ್ಲಾಪ್ ಶೋ ನಡೆಸುತ್ತಿದ್ದಾರೆ.
ಅವರಂತಹ ಸ್ಟಾರ್ ಆಟಗಾರ ತಂಡದ ಕೈ ಹಿಡಿಯದೇ ಇರುವುದಕ್ಕೇ ಬಾಂಗ್ಲಾದಂತಹ ದುರ್ಬಲ ತಂಡದ ಎದುರು ಟೆಸ್ಟ್ ಸರಣಿ ಸೋಲುವಂತಾಗಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದು ಬಾಬರ್ ಅಜಂ ಕಟ್ಟಾ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಕಾರಣ ಏನೇ ಇರಲಿ, ಫಾರ್ಮ್ ಗೆ ಬರಲು ಹೆಣಗಾಡುತ್ತಿರುವ ಬಾಬರ್ ಗೆ ಈಗ ವಿರಾಟ್ ಕೊಹ್ಲಿ ಬೆಂಬಲಿಸಿ ಒಂದು ಮಾತನಾಡಿದರೂ ಸಾಕು, ಅವರ ಮನೋಬಲ ಹೆಚ್ಚಲಿದೆ ಎಂಬುದು ಅಭಿಮಾನಿಗಳ ಭರವಸೆ. ಹೀಗಾಗಿ ಕೊಹ್ಲಿಗೆ ನೀವಾದರೂ ಒಂದು ಮಾತು ಬಾಬರ್ ಬೆಂಬಲಿಸಿ ಮಾತನಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸುತ್ತಿದ್ದಾರೆ.