Publish Date: Tue, 03 Sep 2024 (17:26 IST)
Updated Date: Tue, 03 Sep 2024 (17:29 IST)
ದುಬೈ: ಪ್ರತಿಷ್ಠಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಡೆಯುವ ದಿನಾಂಕ ರಿವೀಲ್ ಆಗಿದೆ. 2023 ರಿಂದ 2025 ರವರೆಗೆ ನಡೆಯುವ ಟೆಸ್ಟ್ ಪಂದ್ಯಗಳನ್ನು ಚಾಂಪಿಯನ್ ಶಿಪ್ ಗೆ ಪರಿಗಣಿಸಲಾಗುತ್ತದೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಒಟ್ಟು 9 ತಂಡಗಳಿವೆ. 2023 ರಿಂದ 2025 ರೊಳಗೆ ನಡೆಯುವ ಪಂದ್ಯಗಳಲ್ಲಿ ಸಿಗುವ ರೇಟಿಂಗ್ ಪಾಯಿಂಟ್ ಗನುಗುಣವಾಗಿ ಅಗ್ರ ಎರಡು ಸ್ಥಾನ ಪಡೆದ ತಂಡಗಳು ಫೈನಲ್ ಪಂದ್ಯವಾಡಲಿದೆ. ಈಗಾಗಲೇ ಎರಡು ಬಾರಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಡೆದಿದೆ.
ಇದೀಗ ಮೂರನೇ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಮುಂದಿನ ವರ್ಷ ಅಂದರೆ 2025 ರ ಜೂನ್ 11 ರಿಂದ 15 ರವರೆಗೆ ನಡೆಯಲಿರುವುದು ಪಕ್ಕಾ ಆಗಿದೆ. ಈ ಪಂದ್ಯಕ್ಕೆ ಇಂಗ್ಲೆಂಡ್ ನ ಲಾರ್ಡ್ಸ್ ಮೈದಾನ ಆತಿಥ್ಯ ವಹಿಸಲಿದೆ. ಕಳೆದ ಎರಡು ವಿಶ್ವ ಚಾಂಪಿಯನ್ ಶಿಪ್ ಫೈನಲ್ ಇಂಗ್ಲೆಂಡ್ ನ ಓವಲ್ ಮೈದಾನದಲ್ಲಿ ನಡೆದಿತ್ತು.
ವಿಶೇಷವೆಂದರೆ ಭಾರತ ಕಳೆದ ಎರಡೂ ಬಾರಿ ಫೈನಲ್ ತಲುಪಿ ಎರಡೂ ಬಾರಿಯೂ ಸೋತು ರನ್ನರ್ ಅಪ್ ಆಗಿತ್ತು. ಈಗಿನ ಅಂಕಪಟ್ಟಿ ಪ್ರಕಾರ ಭಾರತ ಅಗ್ರ ಸ್ಥಾನದಲ್ಲಿದೆ. ಮೊದಲ ಡಬ್ಲ್ಯುಟಿಸಿ ಚಾಂಪಿಯನ್ ಶಿಪ್ ನ್ಯೂಜಿಲೆಂಡ್ ಪಾಲಾಗಿದ್ದರೆ ಎರಡನೇ ಬಾರಿಗೆ ಆಸ್ಟ್ರೇಲಿಯಾ ಗೆದ್ದುಕೊಂಡಿತ್ತು.