Select Your Language

Notifications

webdunia
webdunia
webdunia
webdunia

ಮೂರೂ ಮಾದರಿಯಲ್ಲಿ ನಂ.1: ಟೀಂ ಇಂಡಿಯಾ ವಿಶ್ವದಾಖಲೆ

Team India

Krishnaveni K

ಮುಂಬೈ , ಭಾನುವಾರ, 10 ಮಾರ್ಚ್ 2024 (16:32 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ದಿಗ್ವಿಜಯ ಸಾಧಿಸಿದ ಟೀಂ ಇಂಡಿಯಾ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದೆ. ಈ ಮೂಲಕ ಟೆಸ್ಟ್, ಏಕದಿನ ಮತ್ತು ಟಿ20 ಮೂರೂ ಮಾದರಿಯಲ್ಲಿ ನಂ.1 ಪಟ್ಟಕ್ಕೇರಿದೆ.

ಇದರೊಂದಿಗೆ ಮೂರೂ ಮಾದರಿಯಲ್ಲಿ ನಂ.1 ಸ್ಥಾನಕ್ಕೇರಿದ ಎರಡನೇ ತಂಡ ಎಂಬ ವಿಶ್ವದಾಖಲೆ ಮಾಡಿದೆ. ಇದಕ್ಕೆ ಮೊದಲು ದ.ಆಫ್ರಿಕಾ ಈ ದಾಖಲೆ ಮಾಡಿತ್ತು. ಇದೀಗ ಭಾರತ ಮೂರೂ ಮಾದರಿಯಲ್ಲಿ ಅಗ್ರ ಪಟ್ಟದಲ್ಲಿ ಮೆರೆದಾಡಿದೆ.  2012 ರಲ್ಲಿ ಗ್ರೇಮ್ ಸ್ಮಿತ್ ನಾಯಕತ್ವದ ದ.ಆಫ್ರಿಕಾ ತಂಡ ಮೂರೂ ಮಾದರಿಯಲ್ಲಿ ಅಗ್ರ ಸ್ಥಾನಕ್ಕೇರಿತ್ತು.

ಅದಾದ ಬಳಿಕ ಟೀಂ ಇಂಡಿಯಾವೇ ಈ ಸಾಧನೆ ಮಾಡುತ್ತಿದೆ. ಇದಕ್ಕೆ ಮೊದಲೂ ಒಮ್ಮೆ ಟೀಂ ಇಂಡಿಯಾ ಮೂರೂ ಮಾದರಿಯಲ್ಲಿ ನಂ.1 ಆಗಿತ್ತು. ಆ ಮೂಲಕ ಎರಡನೇ ಬಾರಿಗೆ ಈ ಸಾಧನೆ ಮಾಡುತ್ತಿರುವ ವಿಶ್ವದ ಏಕೈಕ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ 4-1 ಅಂತರದಿಂದ ಗೆದ್ದ ಟೀಂ ಇಂಡಿಯಾ ಡಬ್ಲ್ಲುಟಿಸಿ ಶ್ರೇಯಾಂಕ ಪಟ್ಟಿಯಲ್ಲೂ ನಂ.1 ಸ್ಥಾನ ಭದ್ರಪಡಿಸಿದೆ. ಡಬ್ಲ್ಲುಟಿಸಿಯಲ್ಲಿ ಒಟ್ಟು 9 ಪಂದ್ಯಗಳ ಪೈಕಿ 6 ಗೆಲುವು ಕಂಡಿರುವ ಟೀಂ ಇಂಡಿಯಾ 68.51% ಗೆಲುವಿನ ಸರಾಸರಿಯೊಂದಿಗೆ ಅಗ್ರ ಸ್ಥಾನದಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನಿಂದ ಲೋಕಸಭೆಗೆ ಸ್ಪರ್ಧಿಸಲಿರುವ ಕ್ರಿಕೆಟಿಗ ಯೂಸುಫ್ ಪಠಾಣ್