Select Your Language

Notifications

webdunia
webdunia
webdunia
webdunia

ಕಾಂಗೋದಲ್ಲಿ ಅಳುವ ರೋಗಕ್ಕೆ 50ಕ್ಕೂ ಅಧಿಕ ಮಂದಿ ಬಲಿ: ವೈದ್ಯ ಲೋಕಕ್ಕೆ ಸವಾಲಾದ ನಿಗೂಢ ಕಾಯಿಲೆ

ಕಾಂಗೋದಲ್ಲಿ ಅಳುವ ರೋಗಕ್ಕೆ 50ಕ್ಕೂ ಅಧಿಕ ಮಂದಿ ಬಲಿ: ವೈದ್ಯ ಲೋಕಕ್ಕೆ ಸವಾಲಾದ ನಿಗೂಢ ಕಾಯಿಲೆ

Sampriya

ಈಕ್ವೆಟರ್‌ , ಗುರುವಾರ, 27 ಫೆಬ್ರವರಿ 2025 (15:34 IST)
Photo Courtesy X
ಈಕ್ವೆಟರ್‌: ಮಧ್ಯ ಆಫ್ರಿಕಾದ ವಾಯುವ್ಯ ಕಾಂಗೋದ ಈಕ್ವೆಟರ್ ಪ್ರಾಂತ್ಯದಲ್ಲಿ ಪತ್ತೆಯಾದ ಹೊಸ ಕಾಯಿಲೆಗೆ ದೇಶವೇ ಬೆಚ್ಚಿಬಿದ್ದಿದೆ. ಈ ನಿಗೂಢ ಕಾಯಿಲೆಗೆ ಈವರೆಗೆ 50ಕ್ಕೂ ಮಂದಿ ಸಾವನ್ನಪ್ಪಿದ್ದಾರೆ.

ಈಕ್ವೆಟರ್‌ ಪ್ರಾಂತ್ಯದ ಹಳ್ಳಿಗಳಲ್ಲಿ ಈ ರೋಗ ಮೊದಲು ಪತ್ತೆಯಾಗಿದೆ. ಈ ಕಾಯಿಲೆ ಹೇಗೆ ಹರಡುತ್ತಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈಕ್ವೆಟರ್‌ನ ಆರೋಗ್ಯ ಅಧಿಕಾರಿಗಳು 400ಕ್ಕೂ ಅಧಿಕ ಪ್ರಕರಣಗಳನ್ನು ಪತ್ತೆ ಹೆಚ್ಚಿದ್ದಾರೆ.  ರೋಗ ಪತ್ತೆಯಾದ ಜನರಲ್ಲಿ ಅಳುವುದು ಪ್ರಮುಖ ಲಕ್ಷಣವಾಗಿದೆ. ಸಾವಿಗೀಡಾದ ಶೇ50ರಷ್ಟು ಮಂದಿ ಅನಾರೋಗ್ಯಕ್ಕೆ ತುತ್ತಾದ ಕೆಲವೇ ಗಂಟೆಗಳಲ್ಲಿ ಸಾವಿಗೀಡಾಗಿದ್ದಾರೆ.

ಬೊಲೊಕೊ ಎಂಬ ಹಳ್ಳಿಯಲ್ಲಿ ಮೊದಲ ಪ್ರಕರಣ ದಾಖಲಾಗಿದ್ದು, ಅಲ್ಲಿ ಬಾವಲಿ ತಿಂದ 48 ಗಂಟೆಗಳ ಒಳಗೆ ಮೂರು ಮಕ್ಕಳು ಸಾವನ್ನಪ್ಪಿದ್ದರು. ಬೊಮೊಟೆಯಲ್ಲಿ 400ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ. ಈ ಪೈಕಿ ಕೆಲವರಲ್ಲಿ ಮಲೇರಿಯಾ ಕಾಯಿಲೆ ಪತ್ತೆಯಾಗಿದೆ.

ರೋಗದಿಂದ ಬಹಳಷ್ಟು ಸಾವುಗಳು ಸಂಭವಿಸಿದೆ. ಈ ಬಗ್ಗೆ ಪರೀಕ್ಷೆ ನಡೆಯುತ್ತಿದೆ. ಹಂತ ಹಂತವಾಗಿ ಜನರಲ್ಲಿ ಮಲೇರಿಯಾದ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಬಿಕೊರೊ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸೆರ್ಗೆ ನ್ಗಾಲೆಬಾಟೊ ಹೇಳಿದ್ದಾರೆ.

ರೋಗ ಕಾಣಿಸಿಕೊಂಡ ಬಹುತೇಕ ರೋಗಿಗಳಲ್ಲಿ ಜ್ವರ, ಶೀತ, ಮೈ-ಕೈ ನೋವು ಮತ್ತು ಅತಿಸಾರದಂತಹ ಲಕ್ಷಣಗಳು ಕಾಣಿಸಿಕೊಂಡಿವೆ. 59 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ತೀವ್ರ ಬಾಯಾರಿಕೆ, ಮಕ್ಕಳಲ್ಲಿ ನಿರಂತರ ಅಳುವ ಲಕ್ಷಣಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಯಾಗರಾಜ್‌ನಲ್ಲಿ ಮಹಾ ಕುಂಭಮೇಳ ತೆರೆಬಿದ್ದ ಬೆನ್ನಲ್ಲೇ ಸ್ವಚ್ಛತಾ ಮೇಳಕ್ಕೆ ಚಾಲನೆ